ಕಲಘಟಗಿ:2015 ರಲ್ಲಿ ಕೇಂದ್ರ ಸರ್ಕಾರ ಕಾನೂನು ನಿಯಮ ತಿದ್ದುಪಡಿ ಮಾಡಿದರು ಕೂಡಾ ಇನ್ನೂ ದಲಿತರ ಮೇಲಿನ ದೌರ್ಜನ್ಯ,ಸಾಮಾಜಿಕ ಬಹಿಷ್ಕಾರ,ಅಸ್ಪೃಶ್ಯತೆ ಇನ್ನೂ ಜೀವಂತವಾಗಿವೆ ಎಂದು ಡಾ. ಅಂಬೇಡ್ಕರ ಸಮುದಾಯ ಪ್ರಗತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಲಕ್ಷ್ಮಣ ಬಕ್ಕಾಯಿ ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ತಾಲೂಕಾ ಆಡಳಿತ,ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ನಿಯಮಗಳ 1977 ಕರ್ನಾಟಕ ಅನುಸೂಚಿತ ಜಾತಿಗಳ ಪಂಗಡಗಳ ತಿದ್ದುಪಡಿ ಅಧಿನಿಯಮ 2015 ಮತ್ತು ತಿದ್ದುಪಡಿ ನಿಯಮಗಳ 2016ರ ಅನುಷ್ಠಾನ ಕುರಿತು ಅರಿವು ಮೂಡಿಸುವ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿ,ದಲಿತರಿಗೆ ನ್ಯಾಯ ಸಿಗದೆ 35 ಲಕ್ಷ ಕೇಸ್ ಗಳು ಬಾಕಿ ಇವೆ.ಹಾಗಾದರೆ ಎಲ್ಲಿದೆ ದಲಿತರಿಗೆ ನ್ಯಾಯ ಎಂದು ವಿಷಾದ ವ್ಯಕ್ತಪಡಿಸಿದರು.
ತಹಸೀಲ್ದಾರ ಅಶೋಕ ಶಿಗ್ಗಾವಿ,ತಾ. ಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ,ಚಂದ್ರಗೌಡ ಪಾಟೀಲ,ಸಮಾಜ ಕಲ್ಯಾಣಾಧಿಕಾರಿ ಎ.ಜೆ ಯೋಗಪ್ಪನವರ,ಸಿಪಿಐ ಪ್ರಭು ಸೂರಿನ,ಎಂ ಎಸ್ ಧನಿಗೊಂಡ,ಎಪಿಎಂಸಿ ಅಧ್ಯಕ್ಷ ಅಶೋಕಗೌಡ ಪಾಟೀಲ,ರಾಜು ವಾಲಿಕಾರ, ಮಂಜುನಾಥ ದೊಡ್ಡಮನಿ,ಶರೀಫ ಮಾದರ,ಮಂಜುನಾಥ ಮಾದರ,ಚಂದ್ರು ನಡುವಿನಮನಿ, ಮಹದೇವ ಮಾದರ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
20/01/2021 07:11 pm