ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ಬಳ್ಳಿಯ 13 ಜನ ಗ್ರಾಮ ಪಂಚಾಯ್ತಿ ಸದಸ್ಯರು ನಾಪತ್ತೆ!

ಧಾರವಾಡ: ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ, ಇದರ ಮಧ್ಯೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ 13 ಜನ ಸದಸ್ಯರು ಇದೀಗ ನಾಪತ್ತೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕೂಡ ಪ್ರಕಟವಾಗಿದ ಕೂಡಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈ ರೀತಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ಕಿಡ್ನ್ಯಾಪ್ ಮಾಡಿ ಲಾಬಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿಗೆ ಒಟ್ಟು 32 ಜನ ಸದಸ್ಯರಿದ್ದು, ಆ ಪೈಕಿ ಇದೀಗ 13 ಜನ ಸದಸ್ಯರು ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಗಳು ಕೂಡ ಸ್ವಿಚ್ ಆಫ್ ಆಗಿವೆ. ಆಯಾ ವಾರ್ಡಿನ ಜನತೆ ತಾವು ಆರಿಸಿ ತಂದ ಸದಸ್ಯರು ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ.

ಈ ಗ್ರಾಮಕ್ಕೆ ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಮೀಸಲಾತಿ ಪ್ರಕಟವಾದ ನಂತರ ಹೆಚ್ಚು ಲಾಭಿ ನಡೆಯುವುದರಿಂದ ಅದಕ್ಕಿಂತ ಪೂರ್ವದಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬಲ ವ್ಯಕ್ತಪಡಿಸಲು ಈ ರೀತಿ ಸದಸ್ಯರನ್ನು ಕಿಡ್ನ್ಯಾಪ್ ಮಾಡಿ ಅವರಿಗೆ ಭರ್ಜರಿ ಟೂರ್ ಮಾಡಿಸಿ ಕರೆದುಕೊಂಡು ಬರುತ್ತಾರೆ. ಚುನಾವಣೆ ದಿನ ಅಥವಾ ಚುನಾವಣೆ ಮುಗಿದ ನಂತರ ಈ ನಾಪತ್ತೆಯಾದ ಸದಸ್ಯರು ಬರುವ ಸಾಧ್ಯತೆ ಇರುತ್ತದೆ.

Edited By : Nagaraj Tulugeri
Kshetra Samachara

Kshetra Samachara

04/01/2021 07:38 pm

Cinque Terre

28.03 K

Cinque Terre

4

ಸಂಬಂಧಿತ ಸುದ್ದಿ