ನವಲಗುಂದ : ನವಲಗುಂದ ತಾಲೂಕಿನಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮತದಾನ ಒಟ್ಟು 14 ಗ್ರಾಮ ಪಂಚಾಯತಿಗಳ 90 ಮತಗಟ್ಟೆಗಳಲ್ಲಿ ನಡೆದಿದ್ದು, ಒಟ್ಟು ಮತ ಚಲಾಯಿಸಿದವರ ಸಂಖ್ಯೆ 48,828 (ಪುರುಷ- 25,967 ಮಹಿಳೆ- 22,861) ಆಗಿದ್ದು, ಶೇ. 77.80 ರಷ್ಟು ಮತದಾನವಾಗಿದೆ.
ಇನ್ನು ತಾಲೂಕಿನ 14 ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆಯು ನವಲಗುಂದ ಪಟ್ಟಣದ ಮಾಡೆಲ್ ಎಜುಕೇಶನ್ ಬೋರ್ಡ ಬಾಲಕೀಯರ ಪ್ರೌಢ ಶಾಲೆಯಲ್ಲಿ ನಡೆಯಲಿದ್ದು, 25 ಜನ ಕೌಂಟಿಂಗ್ ಸುಪರವೈಸರ್ ಮತ್ತು 50 ಕೌಂಟಿಂಗ್ ಸಹಾಯಕರನ್ನು ನೇಮಿಸಲಾಗಿದೆ.
Kshetra Samachara
29/12/2020 08:53 am