ಹುಬ್ಬಳ್ಳಿ: ಲಿಂಗಾಯತ ಶಿವಶಿಂಪಿ ಸಮಾಜ ಸಂಘ ಹಳೆ ಹುಬ್ಬಳ್ಳಿ ವತಿಯಿಂದ ಶಿವಶಿಂಪಿ ಸಂಕ್ರಾಂತಿ ಸಂಭ್ರಮವನ್ನು ಮಾರ್ಚ್-6 ರಂದು ಬೆಳಿಗ್ಗೆ 10 ಗಂಟೆಗೆ ಗೋಕುಲ ರಸ್ತೆಯ ಮಂಜುನಾಥ ನಗರದ ಕೆ.ಎಸ್.ಶರ್ಮಾ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಶಿವಶಿಂಪಿ ಹೇಳಿದರು.
ಈ ಸಮಾರಂಭಕ್ಕೆ ಶಿರಹಟ್ಟಿ ಪಕ್ಕೀರ ದಿಂಗಾಲೇಶ್ವರ ಸ್ವಾಮಿ, ಕುಂದರಗಿಯ ಮ.ನಿ.ಪ್ರ ಅಮರಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುತ್ತಿದ್ದಾರೆ ಎಂದರು.
ಈ ಸಮಾರಂಭದಲ್ಲಿ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ನೃತ್ಯ, ಸಂಗೀತ, ಹಾಸ್ಯ, ವಚನಾಮೃತ, ಚಿಣ್ಣರಿಗಾಗಿ ವೇಷಭೂಷಣ, ಚಿತ್ರಕಲೆ ಮತ್ತು ಮಹಿಳೆಯರಿಗೆ ರಂಗೋಲಿ ಸ್ಫರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
Kshetra Samachara
03/03/2022 07:16 pm