ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೋವಿಡ್-19 ರಿಂದ ಮೃತಪಟ್ಟವರಿಗೆ ಪರಿಹಾರ ಧನದ ಚೆಕ್ಕ್ ವಿತರಣೆ

ನವಲಗುಂದ : ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಕೋವಿಡ್-19 ರಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್ಕನ್ನು ಜವಳಿ ಮತ್ತು ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ವಿತರಿಸಿದರು.

ಶುಕ್ರವಾರ ಪಟ್ಟಣದ‌ ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಿಹಾರ ಧನದ ಚೆಕ್ಕನ್ನು ವಿತರಿಸುವುದರೊಂದಿಗೆ ಕೊರೋನಾ ಸಮಯದಲ್ಲಿ ಜೀವ ಕಳೆದುಕೊಂಡ ಕುಟುಂಬದವರ ಆರ್ಥಿಕ ಸ್ಥಿತಿಯನ್ನ ಸುಧಾರಣೆ ಮಾಡುವ ಜೊತೆಗೆ, ನೊಂದ ಕುಟುಂಬದವರ ಜೊತೆ ಸದಾಕಾಲ ಇರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ನವೀನ ಹುಲ್ಲೂರ, ಮುಖಂಡರಾದ ಎ.ಎಂ.ಮನಮಿ, ಚಂದ್ರಶೇಖರ ಹುಲಮನಿ ರವರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/12/2021 06:28 pm

Cinque Terre

18.6 K

Cinque Terre

1

ಸಂಬಂಧಿತ ಸುದ್ದಿ