ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿರಾಣಿಗೆ ಟಾಂಗ್ ಕೊಟ್ಟ ಕೂಡಲ ಸಂಗಮ ಸ್ವಾಮೀಜಿ

ಸಚಿವ ಮುರುಗೇಶ ನಿರಾಣಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ವೈಮನಸ್ಸಿಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದು, ಮಾತಿನ ಮೂಲಕವೇ ನಿರಾಣಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಮ್ಮ ಸಮಾಜದಲ್ಲಿ ಯಾರು ಪ್ರಬಲ ನಾಯಕರು? ಯಾರು ದುರ್ಬಲ ನಾಯಕರು ಎಂಬುದು ಗೊತ್ತಾಗಿದೆ. ಮೀಸಲಾತಿ ಪಾದಯಾತ್ರೆಯಲ್ಲಿ ಬಂದವರು ನಮ್ಮ ಸಮಾಜದ ಪ್ರಬಲ ನಾಯಕರು. ಮೂರನೇ ಪೀಠದ ಬಗ್ಗೆ ಮಾತನಾಡಿದಾಗ ನಿರಾಣಿ ಅವರಿಗೆ ಆವತ್ತೇ ಉತ್ತರ ಕೊಟ್ಟಿದ್ದೇನೆ. ಅವರ ಮಾತಿಗೆ ಉತ್ತರ ಕೊಟ್ಟು ಮುಗಿದಿದೆ. ಅಲ್ಲಿಗೆ ಅವರೂ ಸುಮ್ಮನಾದರು ನಾವೂ ಸುಮ್ಮನಾದೆವು. ಆವತ್ತೆ ಎಲ್ಲವನ್ನು ಮರೆತು ಪಂಚಮಸಾಲಿ ಹೋರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

ಸಮಾಜದ ಎಲ್ಲ ಶಾಸಕರು, ಸಚಿವರು ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಯಾರು ಬೆಂಬಲ ಕೊಡುತ್ತಾರೋ ಜನ ಅವರನ್ನು ಪ್ರೀತಿ ಮಾಡುತ್ತಾರೆ. ಪಾದಯಾತ್ರೆ ಮಾಡುವ ಮುಂಚೆಯೇ ಯಾರು ಪ್ರಬಲ ನಾಯಕರು ಯಾರು ದುರ್ಬಲ ನಾಯಕರು ಎಂದು ಗೊತ್ತಿತ್ತು. ಹಾಗಾಗಿ ಪ್ರಬಲ ನಾಯಕರು ಈಗ ನಮ್ಮ ಜೊತೆಗಿರುವುದು ನಮ್ಮ ಸೌಭಾಗ್ಯ ಎಂದರು.

ಮೀಸಲಾತಿ ವಿಚಾರದ ಬಗ್ಗೆ ಕೆಲವರಿಗೆ ಅಸೂಯೆ ಇದೆ. ಯತ್ನಾಳ, ಸಿ.ಸಿ.ಪಾಟೀಲ ಹಾಗೂ ಅರವಿಂದ ಬೆಲ್ಲದ ಅವರಿಗೆ ಹೆಸರು ಬರುತ್ತದೆ ಎಂಬ ಅಸೂಯೆ ಇದೆ. ಈ ಅಸೂಯೆ ಕಿತ್ತೂರು ಹೋರಾಟದ ಸಮಯದಲ್ಲಿಯೂ ಇತ್ತು. ಹಾಗಾಗಿ ಯಾರು ಅಸೂಯೆ ಪಡುತ್ತಿದ್ದಾರೋ ಅವರನ್ನು ನಾವು ದ್ವೇಷ ಮಾಡುವುದು ಬೇಡ ಎಂದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಜುಲೈ 30 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು. ಈ ಬಗ್ಗೆ ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ. ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ ಎಂದರು.

Edited By :
Kshetra Samachara

Kshetra Samachara

26/07/2022 05:00 pm

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ