ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಹೊರಟ್ಟಿ ವಿರುದ್ಧ ತೊಡೆ ತಟ್ಟಿದ ಮತ್ತೊಬ್ಬ ಶಿಕ್ಷಕ

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ಬಸವರಾಜ ಹೊರಟ್ಟಿ ಅವರ ವಿರುದ್ಧ ಮತ್ತೋರ್ವ ಶಿಕ್ಷಕ ತೊಡೆ ತಟ್ಟಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಏಳು ಬಾರಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ ಬಸವರಾಜ ಹೊರಟ್ಟಿ ಈ ಬಾರಿ ಬಿಜೆಪಿಗೆ ಸೇರಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಲು ಹೊರಟಿದ್ದಾರೆ. ಹೊರಟ್ಟಿ ಅವರು ಯಾವ ಲ್ಯಾಮಿಂಗ್ಟನ್ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರೋ ಅದೇ ಶಾಲೆಯ ಶಿಕ್ಷಕರಾಗಿದ್ದ ಶ್ರೀಶೈಲ ಗಡದಿನ್ನಿ ಎನ್ನುವವರು ಜೆಡಿಎಸ್ ಟಿಕೆಟ್ ಪಡೆದು ಇದೀಗ ಹೊರಟ್ಟಿ ವಿರುದ್ಧವೇ ತೊಡೆ ತಟ್ಟಿದ್ದಾರೆ.

ಬುಧವಾರ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ಶ್ರೀಶೈಲ ಗಡದಿನ್ನಿ ಅವರು ಚುನಾವಣಾಧಿಕಾರಿಯೂ ಆದ ಧಾರವಾಡ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಹಿಂದೆ ಹೊರಟ್ಟಿ ಅವರ ಚುನಾವಣೆಯನ್ನು ನಾವೇ ಮಾಡಿದ್ದೇವೆ. ಚುನಾವಣೆ ಹೇಗೆ ಮಾಡುವುದು ಎಂಬುದು ನಮಗೆ ಗೊತ್ತಿದೆ. ಖಂಡಿತ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊರಟ್ಟಿ ಚುನಾವಣಾ ವೇಳೆ ಗಡದಿನ್ನಿ ಅವರೇ ಮತದಾರರ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಇತ್ಯಾದಿ ಕೆಲಸಗಳನ್ನು ಮಾಡಿದ್ದಾರಂತೆ. ಹೀಗಾಗಿ ಎಲ್ಲ ಶಿಕ್ಷಕರನ್ನು ವಿಶ್ವಾಸಕ್ಕೆ ಪಡೆದು ಚುನಾವಣಾ ಕಣಕ್ಕಿಳಿದಿರುವುದಾಗಿ ಗಡದಿನ್ನಿ ತಿಳಿಸಿದರು.

Edited By :
Kshetra Samachara

Kshetra Samachara

25/05/2022 04:59 pm

Cinque Terre

75.25 K

Cinque Terre

9

ಸಂಬಂಧಿತ ಸುದ್ದಿ