ಬಸವಕಲ್ಯಾಣದಲ್ಲಿ ಈಗಿರುವ ಪೀರಪಾಶಾ ದರ್ಗಾದಲ್ಲೇ ಅನುಭವ ಮಂಟಪ ಇತ್ತು ಎಂಬುದನ್ನು ಖಚಿತವಾಗಿ ಹೇಳಲಿಕ್ಕಾಗದು ಎಂದು ಮುಮ್ಮಿಗಟ್ಟಿಯ ಡಾ.ಬಸವಾನಂದ ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಅದೇ ಕಟ್ಟಡದಲ್ಲಿ ಅನುಭವಮಂಟಪ ಕಟ್ಟಿದರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಅನುಭವ ಮಂಟಪದಲ್ಲಿ 1.96 ಲಕ್ಷ ಗಣಂಗಳು ಒಂದು ಕಟ್ಟಡದಲ್ಲಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ.
ಬಸವ ಕಲ್ಯಾಣದಲ್ಲಿ ಲಕ್ಷಾಂತರ ಗಣ ಮೇಳಗಳನ್ನು ಬಸವಣ್ಣನವರು ಮಾಡಿದ್ದಾರೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದದ್ದು ನಿಜ. ಆದರೆ, ಈಗಿರುವ ಪೀರಪಾಶಾ ದರ್ಗಾದಲ್ಲೇ ಅದು ಇತ್ತು ಎಂಬುದನ್ನು ಖಚಿತವಾಗಿ ಹೇಳಲಿಕ್ಕಾಗದು. ಜಮಾದಾರ ಕೂಡ ಇದನ್ನೇ ಪ್ರತಿಪಾದಿಸುತ್ತಾರೆ. ಪೀರಪಾಶಾ ದರ್ಗಾ ಶರಣರ ತಾಣವಾಗಿರಬಹುದು. ಅಲ್ಲಿ ಸಣ್ಣ ಸಣ್ಣ ಗುಹೆ, ಕಟ್ಟಡಗಳಿವೆ. ಶರಣರು ಅಲ್ಲಿ ಏನಾದರೂ ಅನುಷ್ಠಾನ ಮಾಡಿರಬಹುದು. ಶರಣರು ಕಟ್ಟಡಕ್ಕೆ ಮಹತ್ವ ಕೊಟ್ಟಿರಲಿಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/06/2022 01:08 pm