ಪ್ರಸ್ತುತ ರಾಜ್ಯದ ರಾಜಕೀಯ ವ್ಯವಸ್ಥೆ ಅಸ್ಥಿರಗೊಂಡಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಿರ್ನಾಮಗೊಂಡಿದೆ. ಹಿಂದುಗಳ ಹಾಗೂ ಹಿಂದೂ ಕಾರ್ಯಕರ್ತರು ನಿರ್ಭಯದಿಂದ ಬದುಕು ನಡೆಸುವುದು ಕಷ್ಟವಾಗಿದೆ. ಹರ್ಷ, ಚಂದ್ರು, ಪ್ರವೀಣ ಹತ್ಯೆಯ ಹಿಂದೆ ಕೆಟ್ಟ ಮನಸ್ಥಿತಿ ಎದ್ದು ಕಾಣುತ್ತಿದೆ. ಈ ಎಲ್ಲ ಘಟನೆಗಳ ಹಿಂದೆ ಎಸ್.ಡಿ.ಪಿ.ಐ / ಪಿಎಫ್ ಐ ಸಂಘಟನೆಗಳ ಕೈವಾಡ ಇದೆ. ಆದ ಕಾರಣ ಇವೆಲ್ಲ ಸಂಘಟನೆಗಳು ಬ್ಯಾನ್ ಮಾಡಬೇಕೆಂದು ದಕ್ಷಣ ಕನ್ನಡ ಅಖಿಲ ಭಾರತ ಹಿಂದೂಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಗಳ ಬಗ್ಗೆ ಮೇಲ್ನೋಟದ ತನಿಖೆಯಿಂದ ಸರ್ಕಾರ ನಿಷೇಧಿಸುವ ಎದೆಗಾರಿಕೆ ಆಡಳಿತ ಪಕ್ಷಕ್ಕೆ ಇಲ್ಲದೇ ಇರುವುದು ಖೇಧಕರ ಉಂಟಾಗಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಮತೀಯ ಶಕ್ತಿಯನ್ನು ತೊಡೆದು ಹಾಕುವ ಬದಲಾಗಿ, ಅವುಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿವೆ.ಬಿಜೆಪಿ ಯಾವತ್ತೂ ಕೇಸರಿ ಪಕ್ಷವಾಗುವುದಿಲ್ಲ.
ಅಲ್ಲಿ ಅಲ್ಪಸಂಖ್ಯಾತ ಘಟಕಗಳಿವೆ. ತಮ್ಮ ಸ್ವಾರ್ಥ ರಾಜಕಾರಣಕ್ಕೆ ಹಿಂದೂ ಕಾರ್ಯಕರ್ತರನ್ನು ಬಿಜೆಪಿ ಬಲಿಕೊಡುತ್ತದೆ.
ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರ ಜೀವ, ಗೋಮಾತೆ, ಆಸ್ತಿಪಾಸ್ತಿ ರಕ್ಷಣೆಗೆ ಹಿಂದೂ ಶಕ್ತಿಗಳು ಒಂದಾಗಿ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದರು. ಈ ಸರ್ಕಾರದಿಂದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಹಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/08/2022 06:44 pm