ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಡು ಶ್ರೀಮಂತಗೊಳಿಸಿದವರನ್ನು ಯುವ ಪೀಳಿಗೆಗೆ ಪರಿಚಯಿಸುತ್ತಿರುವ ಕವಿವ

ಧಾರವಾಡ: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷವಾದ ಹಿನ್ನೆಲೆ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ನವೆಂಬರ್ ತಿಂಗಳಾದ್ಯಂತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಘ. ಅಷ್ಟೇ ಅಲ್ಲದೇ ಕನ್ನಡ ನಾಡು, ನುಡಿ ಹಾಗೂ ಭಾಷೆಗೆ ಹಿನ್ನಡೆಯಾದಾಗ ಸದಾ ಧ್ವನಿ ಎತ್ತುವ ಏಕೈಕ ಸಂಘ.

ಈಗ ಕರ್ನಾಟಕಕ್ಕೆ ಮರು ನಾಮಕರಣಗೊಂಡು 50 ವರ್ಷವಾದ ಹಿನ್ನೆಲೆಯಲ್ಲಿ ಈ ಸಂಘವು ಈ ತಿಂಗಳಾದ್ಯಂತ "ಧರೆಗೆ ದೊಡ್ಡವರು" ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಆ ಮೂಲಕ ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿದ ಮಹನೀಯರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಬುಧವಾರ ಕೂಡ ಬಿ.ಟಿ.ಲಲಿತಾ ನಾಯಕ ಅವರ ಕುರಿತು ಉಪನ್ಯಾಸ ಮಾಲಿಕೆ ಏರ್ಪಡಿಸಲಾಗಿತ್ತು. ಅವರ ಬದುಕು ಹಾಗೂ ಕೊಡುಗೆ ಕುರಿತು ಕಾರ್ಯಕ್ರಮದಲ್ಲಿ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಮಾಡಲಾಯಿತು. ಧಾರವಾಡದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Suman K
Kshetra Samachara

Kshetra Samachara

20/11/2024 05:25 pm

Cinque Terre

16.49 K

Cinque Terre

1

ಸಂಬಂಧಿತ ಸುದ್ದಿ