ಹುಬ್ಬಳ್ಳಿ: ಕೋವೀಡ್ ಹಗರಣದಲ್ಲಿ ನೇಮಕ ಮಾಡಿದ ಕುನ್ಹಾ ವರದಿ ಸಿಎಂ ಕಚೇರಿಯಿಂದೇ ಸೋರಿಕೆ ಆಗತಾ ಇದೆ ಎಂಬ ವಿಚಾರ, ಯಾವುದಾದರೂ ಒಂದು ಹಗರಣ ಕುರಿತು ತನಿಖಾ ವರದಿ ಬಂದಿಲ್ಲಾ. ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಆದರೆ ಬಹಳಷ್ಟು ಸೂಕ್ಷ್ಮ ಇರುತ್ತದೆ. ಇದರಲ್ಲಿ ಏನಾದರೂ ಮಾಡುವುದಾದರೆ ಮಾಡಿ ಸಚಿವ ಸಂಪುಟದ ಮುಂದೆ ಇಡುತ್ತಾರೆಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು, ಇನ್ನು ಕೋವಿಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡತ್ತಾರೆ. ಮಂಡನೆ ಮಾಡಿದ ತಕ್ಷಣ ವಿಷಯ ಹೊರಗೆ ಬರುತ್ತಿವೆ. ಇದು ಒಂದು ಸಿಎಂ ಕಚೇರಿ ಅಥವಾ ಕುನ್ಹಾ ಕಚೇರಿಯಿಂದ ಆದರೂ ಹೊರಗೆ ಬರುತ್ತವೆ. ಮಾಧ್ಯಮಕ್ಕೆ ಬರುತ್ತದೆ ಅಂದರೆ ಸಿಎಂ ಹಾಗೂ ಕುನ್ಹಾ ಕಚೇರಿಯೇ ಆಧಾರ. ಉಪ ಚುನಾವಣೆ ಇದ್ದ ಕಾರಣ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಲಿಕ್ಕೆ ಲೀಕ್ ಮಾಡಿದರು. ಇದೊಂದು ವ್ಯವಸ್ಥೆಯ ದುರುಪಯೋಗ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/11/2024 06:11 pm