ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವನಗರದಲ್ಲಿ ಬಾರ್ ಅಂಗಡಿ ಓಪನ್, ಸ್ಥಳಾಂತರ ಆಗೋವರೆಗೂ ನಿರಂತರ ಹೋರಾಟ, ಅಬಕಾರಿ ಅಧಿಕಾರಿಗಳೇ ಏನ್ ಮಾಡ್ತಿದ್ದೀರಾ..?

ಹುಬ್ಬಳ್ಳಿ: ನವನಗರ ಎಂದ್ರೆ ಹುಬ್ಬಳ್ಳಿ ಧಾರವಾಡದ ಹೃದಯಭಾಗ, ಇದೇ ನವನಗರದಲ್ಲಿ ಎಲ್ಲ ಕಚೇರಿಗಳಿವೆ, ಆದ್ರೆ ಸ್ಕೂಲ್, ದೇವಸ್ಥಾನ, ಮನೆಗಳು, ಸಾರ್ವಜನಿಕರು ಓಡಾಡುವ ಪ್ರದೇಶದಲ್ಲೇ MRP ದಿ ಲಿಕ್ಕರ್ ಹೌಸ್ ಹೆಸರಲ್ಲಿ ಬಾರ್ ಅಂಗಡಿಯನ್ನು ಓಪನ್ ಮಾಡಿದ್ದನ್ನು, ವಿರೋಧಿಸಿ ಮಹಿಳಾ ಮಂಡಳಿ, ಮತ್ತು ಅಲ್ಲಿನ ನಿವಾಸಿಗಳು ನಿರಂತರ ಹೋರಾಟ ಮಾಡ್ತಿದ್ದಾರೆ. ಆದ್ರೆ ಈ ಅಬಕಾರಿ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತನೆ ಮಾಡ್ತಿದ್ದಾರೆ.

ಹೌದು,,, ನವನಗರ ಮಧ್ಯಭಾಗದಲ್ಲಿ‌ ಸಾರಾಯಿ ಅಂಗಡಿಯನ್ನು ತೆರೆದಿದ್ದಾರೆ. ಈ ನವನಗರ ಪ್ರಶಾಂತ ವಾತಾವರಣ ಹೊಂದಿದ ಪ್ರದೇಶ, ಇಲ್ಲಿ ಸಾಕಷ್ಟು ರಿಟೈರ್ಡ್ ಆಫಿಸರ್ಸ್ ನಿವಾಸ ಹೊಂದಿದ್ದಾರೆ.‌ ಆದ್ರೆ ಆ ವಾತಾವರಣವನ್ನು ಹದಗೆಡಿಸಲು MRP ದಿ ಲಿಕ್ಕರ್ ಹೌಸ್ ಸಾರಾಯಿ ಅಂಗಡಿಯನ್ನು ಓಪನ್ ಮಾಡಿದ್ದಾರೆ. ಇದನ್ನು ಸ್ಥಳಾಂತರ ಮಾಡಲು ಕಳೆದ ಒಂದು ವಾರದಿಂದ ಮಹಿಳೆಯರು, ಸ್ಥಳೀಯ ನಿವಾಸಿಗಳು, ಶಾಸಕರು ಅದೇ ಮದ್ಯದಂಗಡಿ ಮುಂಭಾಗದಲ್ಲಿ ಕುಳಿತು ಬೇಡಾ ಬೇಡಾ ಸಾರಾಯಿ ಅಂಗಡಿ, ನವನಗರಕ್ಕೆ ಬೇಡಾ ಲಿಕ್ಕರ್ ಶಾಪ್ ಎಂಬ ಘೋಷಣೆ ಕೂಗುತ್ತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕ ಅರವಿಂದ ಬೆಲ್ಲದ್, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮದ್ಯದ ಅಂಗಡಿಗೆ ಸ್ಥಳಾಂತರ ಮಾಡಲು ಪಟ್ಟು ಹಿಡಿದಿದ್ದಾರೆ. ಆದ್ರೆ ಇದುವರೆಗೂ ಯಾವ ಅಧಿಕಾರಿಗಳು ಇತ್ತ ಬಂದು ಈ ಸಾರಾಯಿ ಅಂಗಡಿಯನ್ನು ಸ್ಥಳಾಂತರ ಮಾಡಲು ಹೇಳುತ್ತಿಲ್ಲ. ಈ ಮದ್ಯದಂಗಡಿ ಸ್ಥಳಾಂತರ ಆಗೋವರೆಗೂ ಹೋರಾಟ ಬಿಡೋದಿಲ್ಲ ಎಂದು ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ.

ಇನ್ನು ಇದನ್ನೆಲ್ಲ ನೋಡ್ತಿದ್ದರೆ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಕೆಲಸ ಮಾಡಬೇಕಾದ ಸರ್ಕಾರ, ಮತ್ತು ಜನಪ್ರತಿನಿಧಿಗಳು, ಈ ಅಬಕಾರಿ ಅಧಿಕಾರಿಗಳು ಸಾರಾಯಿ ಅಂಗಡಿ ಮಾಲೀಕರಿಗೆ ಸಾಥ್ ಕೊಡ್ತಿದ್ದಾರೆ ಹೊರತು, ಸಾರ್ವಜನಿಕರಿಗೆ ಆಗುವಂತಹ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು ಈ MRP ಸಾರಾಯಿ ಅಂಗಡಿಯನ್ನು ಸ್ಥಳಾಂತರ ಮಾಡೋದಕ್ಕೆ ಸೂಚನೆ ನೀಡಬೇಕು. ಇಲ್ಲವಾದ್ರೆ ಸಾರ್ವಜನಿಕರ ಹಿತದೃಷ್ಟಿಯಿಂದ ಸುದ್ದಿ ಬಿತ್ತರಿಸಲು ಪಬ್ಲಿಕ್ ನೆಕ್ಸ್ಟ್ ಸದಾ ಇರುತ್ತದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Suman K
Kshetra Samachara

Kshetra Samachara

21/11/2024 01:42 pm

Cinque Terre

28.37 K

Cinque Terre

5

ಸಂಬಂಧಿತ ಸುದ್ದಿ