ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸರ ವಿರುದ್ಧ ನಡೆಯಿತು ಹೋರಾಟ: ಮೂರ್ತಿ ತೆರವಿಗೆ ಪೊಲೀಸರ ಹಸ್ತಕ್ಷೇಪದ ಆರೋಪ

ಹುಬ್ಬಳ್ಳಿ: 'ಧಿಕ್ಕಾರ..ಧಿಕ್ಕಾರ ಪೊಲೀಸರಿಗೆ ಧಿಕ್ಕಾರ'.. 'ಬೇಕೆ ಬೇಕು ಅಂಬೇಡ್ಕರ್ ಮೂರ್ತಿ ಬೇಕು' ಎಂಬ ಘೋಷಣೆಗಳು. ಈ ಎಲ್ಲ ಘೋಷಣೆಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಗಾಂಧಿವಾಡ ಕಾಲೋನಿ. ಇಲ್ಲಿ ನೂರಾರು ಕುಟುಂಬಗಳು ಸೇರಿಕೊಂಡು ರೈಲ್ವೆ ಜಾಗೆಯಲ್ಲಿ ಅಂಬೇಡ್ಕರ್ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜಯಂತಿ ಆಚರಿಸಲು ಮುಂದಾಗಿದ್ದವು. ಆದರೆ ಏಕಾಏಕಿ ಕೇಶ್ವಾಪೂರ ಠಾಣೆಯ ಪೊಲೀಸರು ಅಂಬೇಡ್ಕರ್ ಮೂರ್ತಿಯನ್ನು ತೆರವುಗೊಳಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರ ನೇತೃತ್ವದಲ್ಲಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ ಪಾಲಿಕೆ ಸದಸ್ಯೆ ಹಾಗೂ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಗಾಂಧಿವಾಡದಿಂದ ಕೇಶ್ವಾಪೂರ ಪೊಲೀಸ್ ಠಾಣೆಯ ವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸರೊದಿಂಗೆ ಮಾತಿನ ಚಕಮಕಿ ನಡೆಯಿತು. ಎಸಿಪಿ ವಿನೋದ ಮುಕ್ತೇದಾರ್ ಹಾಗೂ ಡಿಸಿಪಿ ಗೋಪಾಲ ಬ್ಯಾಕೋಡ ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ಮನವೊಲಿಸಲು ಮುಂದಾದರು. ಆದರೆ ಸಾರ್ವಜನಿಕರು ಮಾತ್ರ ಮೂರ್ತಿಯನ್ನು ತೆರವು ಮಾಡಿದ ಪೊಲೀಸರ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಅಂಬೇಡ್ಕರ್ ಜಯಂತಿಯ ದಿನವೇ ಇಂತಹದೊಂದು ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Manjunath H D
Kshetra Samachara

Kshetra Samachara

14/04/2022 06:38 pm

Cinque Terre

23.39 K

Cinque Terre

3

ಸಂಬಂಧಿತ ಸುದ್ದಿ