ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾಲಿಸ್ಟರ್ ಧ್ವಜ ಬೇಡ, ಖಾದಿ ಧ್ವಜ ಬೇಕು: ಹರ್ ಘರ್ ತಿರಂಗಾಕ್ಕೆ ಗರಗ ಗ್ರಾಮಸ್ಥರ ವಿರೋಧ

ಧಾರವಾಡ: 75ನೇ ಸ್ವಾತಂತ್ರೋತ್ಸವಕ್ಕೆ ಇನ್ನು 5 ದಿನ ಮಾತ್ರ ಬಾಕಿ ಇದೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಈ ಘೋಷಣೆಗೆ ರಾಷ್ಟ್ರಧ್ವಜದ ಬಟ್ಟೆ ಸಿದ್ಧಪಡಿಸುವ ಗ್ರಾಮವೊಂದು ವಿರೋಧ ವ್ಯಕ್ತಪಡಿಸಿದೆ. ಈ ವಿರೋಧಕ್ಕೆ ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜಕ್ಕೆ ಅನುಮತಿ ನೀಡಿರುವುದೇ ಕಾರಣ.

ಹೌದು! ಧಾರವಾಡ ತಾಲೂಕಿನ ಗರಗ ಗ್ರಾಮವೇ ಇದಕ್ಕೆ ವಿರೋಧ ಮಾಡಿರುವ ಗ್ರಾಮ. ಗರಗ ಗ್ರಾಮ ಇಡೀ ರಾಷ್ಟ್ರಕ್ಕೆ ಚಿರಪರಿಚಿತ. ಇಲ್ಲಿ ಖಾದಿ ಭಂಡಾರ 1954 ರಲ್ಲಿ ಆರಂಭವಾಗಿದ್ದು, ಇದಕ್ಕೆ 1974 ರಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಅನುಮತಿ ಸಿಕ್ಕಿದೆ. ಆದರೆ ಇತ್ತೀಚೆಗೆ ಸರ್ಕಾರ ಇವರಿಂದ ಬಟ್ಟೆ ಖರೀದಿ ಮಾಡಲು ಮುಂದಾಗುತ್ತಿಲ್ಲ. ಈ ಖಾದಿ ಭಂಡಾರದಲ್ಲಿ ತಿಂಗಳಿಗೆ 3500 ರಾಷ್ಟ್ರಧ್ವಜ ಬಟ್ಟೆ ತಯಾರಿ ಮಾಡಲಾಗುತ್ತಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಎಂದು ಘೋಷಣೆ ಮಾಡಿದೆ. ಯಾವ ಧ್ವಜವನ್ನಾದ್ರೂ ಮನೆ ಮೇಲೆ ಹಾರಿಸಬಹುದು ಎಂದು ಸರ್ಕಾರ ಹೇಳಿದೆ. ಆದರೆ, ಧ್ವಜ ಹಾರಿಸಬೇಕಾದ್ರೆ ಅದರದ್ದೇ ಆದ ನಿಯಮ ಇದೆ. ಆದರೆ ಇದನ್ನು ಗಾಳಿಗೆ ತೂರಲು ಈ ಖಾದಿ ಭಂಡಾರದಲ್ಲಿರುವವರು ಮತ್ತು ಗ್ರಾಮಸ್ಥರು ಮುಂದಾಗುತ್ತಿಲ್ಲ. ಹೀಗಾಗಿ ನಾವು ಈ ಹರ್ ಘರ್ ತಿರಂಗಾಗೆ ಬೆಂಬಲ ನೀಡೋದಿಲ್ಲ, ಖಾದಿ ಧ್ವಜ ಇದ್ದರೆ ಮಾತ್ರ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಕಳೆದ ವರ್ಷ ಈ ಖಾದಿ ಭಂಡಾರಕ್ಕೆ ಸರ್ಕಾರದ ವತಿಯಿಂದ ಕೆಲವರು ಬಂದು ಮಾಹಿತಿ ಕೂಡಾ ಪಡೆದು ಹೋಗಿದ್ದಾರಂತೆ. ಪ್ರತಿ ತಿಂಗಳಿಗೆ ಇಲ್ಲಿ 3500 ಧ್ವಜದ ಬಟ್ಟೆ ತಯಾರಿ ಮಾಡಬಹುದು ಎಂದು ಇವರು ಮಾಹಿತಿ ನೀಡಿದ್ದಾರೆ. 10 ಸಾವಿರ ಧ್ವಜ ತಯಾರಿ ಮಾಡಿಕೊಡಲು ಅವರು ಹೇಳಿದ್ದಕ್ಕೆ ಖಾದಿ ಭಂಡಾರದವರು ಸೈ ಎಂದು ಹೇಳಿದ್ದಾರೆ.

ಈಗಾಗಲೇ ಇಲ್ಲಿ ಅಷ್ಟು ಬಟ್ಟೆ ತಯಾರಿ ಕೂಡ ಮಾಡಲಾಗಿದೆ. ಆದರೆ, ಸರ್ಕಾರದ ಕಡೆಯವರು ಮತ್ತೆ ವಾಪಸ್ ಬರಲೇ ಇಲ್ಲ. ಸದ್ಯ ಬಟ್ಟೆ ಹಾಗೆಯೇ ಉಳಿದಿದ್ದು, ಖಾದಿ ಭಂಡಾರದವರು ಸಂಕಷ್ಟ ಎದುರಿಸುವಂತಾಗಿದೆ. ಇದೀಗ ಸದ್ಯ ಬೇರೆ ಬೇರೆ ಬಟ್ಟೆಯ ಧ್ವಜ ಹಾರಿಸೋದಕ್ಕೆ ಇಲ್ಲಿಯ ಜನರು ಬೇಸರ ವ್ಯಕ್ತಪಡಿಸಿದ್ದು, ಈಗ ಹರ್ ಘರ್ ತಿರಂಗಾನೇ ಬೇಡ ಎನ್ನುತ್ತಿದ್ದಾರೆ.

Edited By : Somashekar
Kshetra Samachara

Kshetra Samachara

10/08/2022 02:49 pm

Cinque Terre

20.68 K

Cinque Terre

1

ಸಂಬಂಧಿತ ಸುದ್ದಿ