ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಒತ್ತಾಯ: ಮೇಯರ್‌ಗೆ ಗಜಾನನ ಮೂರ್ತಿ ನೀಡಿ ಪ್ರತಿಭಟನೆ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಗಜಾನನ ಮಹಾ ಮಂಡಳ ಮಹಾನಗರ ಪಾಲಿಕೆಯ ಮಹಾಪೌರರಿಗೆ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.

ಮಹಾನಗರ ಪಾಲಿಕೆಗೆ ಸ್ವತಃ ಗಣಪತಿ ಮೂರ್ತಿ ತೆಗೆದುಕೊಂಡು ಬಂದ ಮಂಡಳದ ಸದಸ್ಯರು ಪಾಲಿಕೆ ಮೇಯರ್ ಗೆ ನೀಡಿದರು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಪ್ರತಿವರ್ಷ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ವರ್ಷವಾದರೂ ಸ್ವತಃ ಪಾಲಿಕೆ ವತಿಯಿಂದ ಚನ್ನಮ್ಮ‌ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ಹಬ್ಬದ ಆಚರಣೆಯಿಂದ ನಗರದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಹಬ್ಬದಲ್ಲಿ ಭಾಗವಹಿಸುವ ಮೂಲಕ ಸೌಹಾರ್ದ ಕಾಪಾಡಬಹುದು.‌ ಆದ್ದರಿಂದ ಪಾಲಿಕೆ‌ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Edited By : Somashekar
Kshetra Samachara

Kshetra Samachara

18/08/2022 03:34 pm

Cinque Terre

96.79 K

Cinque Terre

18

ಸಂಬಂಧಿತ ಸುದ್ದಿ