ಹುಬ್ಬಳ್ಳಿ: ರಾಷ್ಟ್ರೀಯ ಧ್ವಜ ವಿತರಣೆಯಲ್ಲಿ ಎಡವಟ್ಟು ಮಾಡಿದ್ದ ಪಾಲಿಕೆಯ ನಡೆಯನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆಯ ಆಯುಕ್ತರ ಹಾಗೂ ಮೇಯರ್ ನೇತೃತ್ವದಲ್ಲಿ ಧ್ವಜಗಳನ್ನು ವಾಪಸ್ ನೀಡಿದ್ದಾರೆ.
ಹೌದು. ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಪ್ರತಿ ಮನೆ ಮೇಲೂ ರಾಷ್ಟ್ರಧ್ವಜ ಹಾರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಪ್ರತಿ ಪಾಲಿಕೆ ಸದಸ್ಯನಿಗೆ ಒಂದು ಸಾವಿರ ಧ್ವಜ ವಿತರಣೆ ಮಾಡಿದೆ. ಆದರೆ ಮಹಾನಗರ ಪಾಲಿಕೆ ವಿತರಿಸಿರುವ ಧ್ವಜಗಳು ನಿಯಮ ಉಲ್ಲಂಘಿಸಿವೆ. ಹಂಚಿಕೆಯಾಗಿರುವ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ಸಮ ಪ್ರಮಾಣದಲ್ಲಿಲ್ಲ. ಅಶೋಕ ಚಕ್ರ ಧ್ವಜದ ಮಧ್ಯದಲ್ಲಿ ಇರದೇ ಪಕ್ಕದಲ್ಲಿವೆ. ಕೆಲವು ಧ್ವಜಗಳ ಬಣ್ಣ ಮಾಸಿದೆ, ಕೆಲವೊಂದು ಹರಿದಿವೆ. ಇಂತಹ ಧ್ವಜಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೇಯರ್ ಈರೇಶ ಅಂಚಟಗೇರಿ ಹಾಗೂ ಮಹಾನಗರ ಆಯುಕ್ತ ಗೋಪಾಲಕೃಷ್ಣ ಬಿ ಅವರಿಗೆ ವಾಪಸ್ ನೀಡಿದರು.
ಆದರೆ ಮೇಯರ್ ಅವರು ಕೊಟ್ಟ ಧ್ವಜವನ್ನು ಕೂಡ ಸರಿಯಾಗಿ ಸ್ವೀಕರಿಸಿದೆ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂಬ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
Kshetra Samachara
13/08/2022 03:34 pm