ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಹೆಸರಲ್ಲಿ ಏಕ್ಸಲೆಂಟ್ ಲೂಟಿ: ಲೋಕಾಯುಕ್ತಕ್ಕೆ ದೂರು..!

ಹುಬ್ಬಳ್ಳಿ: ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಾಕಷ್ಟು ಚುರುಕುಗೊಂಡಿದೆ. ಆದರೆ ಈ ಚುರುಕಿನ ಹಿಂದೇ ಒಂದು ಬಹುದೊಡ್ಡ ಬಿರುಕು ಇರುವುದು ಬೆಳಕಿಗೆ ಬಂದಿದೆ. ಹಳೇಯ ಗೋಡೆಗೆ ಸುಣ್ಣ ಬಣ್ಣವನ್ನು ಬಳೆದು ಹಣವನ್ನು ಲೂಟಿ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬೆಳಕಿಗೆ ಬಂದಿದೆ.

ಒಂದು ಉದ್ಯಾನವನ್ನು ಆರಂಭಿಕ ಹಂತದಲ್ಲಿಯೇ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡಲು ಸಿಂಗಲ್ ಡಿಜಿಟ್ ನಲ್ಲಿರುವ ಕೋಟಿ ಅನುದಾನ ಸಾಕು. ಆದರೆ ಹಳೇಯ ಮಣ್ಣಿನ ಗೋಡೆಗೆ ಬಣ್ಣ ಬಳೆದು ಸುಮಾರು 26.11 ಕೋಟಿ ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು. ಈ ಹಿಂದೆಯಷ್ಟೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಇಂದಿರಾ ಗಾಜಿನ ಮನೆ ಆವರಣದಲ್ಲಿ ನಿರ್ಮಾಣಗೊಂಡಿರುವ ಬಗ್ಗೆ ವಿಶೇಷ ವರದಿಯೊಂದನ್ನು ಮಾಡಿತ್ತು. ಈಗ ಮುಂದುವರಿದ ಭಾಗವಾಗಿ ಸಾರ್ವಜನಿಕರು ಈ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇನ್ನು ಇರುವ ಗೋಡೆಗಳಿಗೆ ಸುಣ್ಣ ಬಣ್ಣ ಬಳೆದಿದ್ದು, ಮೊದಲು ಇದ್ದ ಕಾರಂಜಿಗೆ ಸ್ವಲ್ಪ ಪ್ರಮಾಣದ ಅಧುನಿಕರಣಗೊಳಿಸಿದ್ದಾರೆ. ಅಲ್ಲದೇ ಫುಟ್ ಪಾಥ್‌ಗಳಿಗೂ ಬಣ್ಣ ಬಳೆದು ಜನರಿಗೆ ಹಗಲಿನಲ್ಲಿಯೇ ನಕ್ಷತ್ರಗಳನ್ನು ತೋರಿಸುವ ರೀತಿಯಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಜನರ ದುಡ್ಡಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ವಿರುದ್ಧ ಕೂಡ ದೂರನ್ನು ಸಲ್ಲಿಸಿದ್ದಾರೆ. ಒಂದೇ ಉದ್ಯಾನವನಕ್ಕೆ ಇಷ್ಟೊಂದು ದುಡ್ಡು ಅವಶ್ಯಕತೆ ಇದೆಯೇ ಎಂಬುವಂತ ಮಾಹಿತಿಯನ್ನು ಅಧಿಕಾರಿಗಳಿಗೆ ಕೇಳಿದರೂ ಕೂಡ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮಹಾತ್ಮ ಗಾಂಧೀಜಿ ಉದ್ಯಾನವನ ವೇದಿಕೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಜನರ ಹಣವನ್ನು ಬೇಕಾಬಿಟ್ಟಿಯಾಗಿ ಪೋಲ್ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಹಿಂದೇ ಯಾವ ಕಾಣದ ಕೈಗಳ ಕೈವಾಡವಿದೆ ಎಂಬುವುದು ಲೋಕಾಯುಕ್ತದ ತನಿಖೆಯ ನಂತರವೇ ಬಯಲಿಗೆ ಬರಬೇಕಿದೆ.

Edited By : Nagesh Gaonkar
Kshetra Samachara

Kshetra Samachara

05/07/2022 06:18 pm

Cinque Terre

68.8 K

Cinque Terre

4

ಸಂಬಂಧಿತ ಸುದ್ದಿ