ಕುಂದಗೋಳ: ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಉರ್ದು ಶಾಲೆವರೆಗೆ ಬ್ರಹ್ಮದೇವರ ದೇವಸ್ಥಾನದ ರಸ್ತೆ ಮಾರ್ಗ ಬರುವ ಫುಟ್‌ಪಾತ್ ಅತಿಕ್ರಮಿಸಿರುವ ಅಂಗಡಿ ಮುಂಗಟ್ಟುಗಳ ತೆರವಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಪೊಲೀಸರ ಬಂದೂಬಸ್ತ್ ನಲ್ಲಿ ನಾಳೆ ಬೆಳಿಗ್ಗೆ 7 ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಇಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಾಯಂಕಾಲ ಸ್ಥಳ ಪರಿಶೀಲನೆ ನಡೆಸಿದರು.
ಫುಟ್‌ಪಾತ್ ತೆರವು ಕಾರ್ಯಾಚರಣೆ ವಿಷಯ ತಿಳಿದ ಬಡ ಡಬ್ಬಾ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಹಾಗೂ ಇತರೆ ವ್ಯಾಪಾರಸ್ಥರು ಅಂಗಡಿ ನಾವೇ ತೆರವು ಮಾಡಿಕೊಳ್ಳುತ್ತೇವೆ. ಸಮಯಾವಕಾಶ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಅಧಿಕಾರಿಗಳು ಸರ್ಕಾರದ ಆದೇಶವಿದೆ ಎಂದು ಸ್ಥಳ ಪರಿಶೀಲನೆ ನಡೆಸುತ್ತಾ ಅಂಗಡಿ ಮುಂಗಟ್ಟುಗಳ ಅತಿಕ್ರಮಣ ತೆರವಿಗೆ ನಾಳೆ ಬೆಳಿಗ್ಗೆವರೆಗೆ ನಿಮಗೆ ಅವಕಾಶ ಇದೆ ಎಂದು ಮುನ್ನಡೆದರು.
Kshetra Samachara
13/05/2022 10:46 pm