ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ನಿಜಕ್ಕೂ ಖಂಡನೀಯ ಎಂದು ಕೃಷಿಕ ಸಮಾಜದ ಅಧ್ಯಕ್ಷ ಅರವಿಂದಪ್ಪ ಕಟಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ ಅವರು,ಕಳೆದ ಏಪ್ರಿಲ್ 6 ರಂದು ಮಧ್ಯಾಹ್ನ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಆಗಮಿಸಿದ ಎಪಿಎಂಸಿ ಆವರಣದಲ್ಲಿದ್ದ ಚಹಾದ ಅಂಗಡಿ ನಡೆಸುತ್ತಿದ್ದ ಸಹೋದರರಾದ ಭೀಮಪ್ಪಾ ದುಂಡಿ ಮತ್ತು ಬಸವರಾಜ ದುಂಡಿ ಎಂಬುವವರು ತಮ್ಮ ಅಂಗಡಿಯ ಬಿಲ್ ಬಾಕಿ ಇರುವ 1.70 ಲಕ್ಷ ರೂಪಾಯಿ ಹಣವನ್ನು ತಕ್ಷಣ ಕೊಡಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಸದಾಶಿವ ಕಾನೂರಿ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭ ಹಲ್ಲೆ ತಡೆಯಲು ಬಂದ ಕಂಪ್ಯೂಟರ್ ಆಪರೇಟರ್ ಶಂಕರ್ ಕೊಟಗಾರ ಅವರನ್ನು ಥಳಿಸಿ ಆವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಹಣದ ವಿಷಯಕ್ಕೂ ಈಗಿರುವ ಅಧಿಕಾರಿ ಸದಾಶಿವ ಕಾನೂರಿ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಹಿಂದಿನ ಕಾರಿ ರಾಯಣ್ಣಗೌಡ್ರು ಎನ್ನುವರು ಬಾಕಿ ಮಾಡಿದ್ದಾರೆ. ಹೀಗಿದ್ದರೂ ಸಹ ಈಗಿರುವ ಅಧಿಕಾರಿ ಸದಾಶಿವ ಅವರು ಎಲ್ಲರ ಎದುರು 90 ಸಾವಿರ ಹಣವನ್ನು ಕೊಡುವುದಾಗಿ ಹೇಳಿದ್ದಾರೆ.
ಈ ಸಮಸ್ಯೆ ಇತ್ಯರ್ಥಕ್ಕೆ ತೃಪ್ತವಾಗದ ಸಹೋದರರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಕಾಣದ ಕೈಗಳ ಕೈವಾಡ ಇರಬಹುದು ಎಂದು ಮೆಲ್ನೋಟಕ್ಕೆ ಕಾಣಿಸುತ್ತದೆ, ಪೊಲೀಸರ ತನಿಖೆಯಿಂದ ನಿಜಾಂಶ ತಿಳಿಯಬೇಕಾಗಿದೆ ಎಂದು ಅರವಿಂದಪ್ಪ ಕಟಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಣರಾವ್ ದೇಸಾಯಿ, ಮಹಾರುದ್ರಪ್ಪ ಮೂಲಿಮನಿ, ಮುಂತಾದವರು ಉಪಸ್ಥಿತರಿದ್ದರು.
Kshetra Samachara
09/04/2022 01:01 pm