ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಧಿಕಾರಿಗಳೇ ಶಾಲೆ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ.!

ನವಲಗುಂದ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಮನೂರ, ಈ ಶಾಲೆಯ ಅವ್ಯವಸ್ಥೆ ಒಂದೆರಡಲ್ಲ. ಈ ಶಾಲೆಯ ವಿದ್ಯಾರ್ಥಿಗಳು ಶೌಚಾಲಯವಿಲ್ಲದೆ ಪರದಾಡುವುದು ಸಾಮಾನ್ಯ ಮಾತ್ರವಲ್ಲದೆ ಪ್ರಾಣಕ್ಕಾಗಿ ಕಾದು ಕುಳಿತ ನೀರಿನ ಟ್ಯಾಂಕ್ ಎಂಥವರಿಗೂ ಭಯ ತರುವಂತಿದೆ.

ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಹೌದು ಸುಕ್ಷೇತ್ರವಾದ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಈ ಶಾಲೆಯ ಇನ್ನೊಂದು ದೊಡ್ಡ ಗೋಳು ಅಂದ್ರೆ ಅದು, ಚಾಂಗದೇವನ ದರ್ಶನಕ್ಕೆ ಬಂದ ಭಕ್ತರು ಶಾಲೆಯ ಆವರಣ ಕೆಡಿಸುತ್ತಿದ್ದಾರಂತೆ, ಅಷ್ಟೇ ಅಲ್ಲದೇ ಈ ಶಾಲೆ ಈಗ ಮಕ್ಕಳ ಪ್ರಾಣಕ್ಕೆ ಕಂಟಕವಾಗಿ ಕಾಡುತ್ತಿದೆ.

ಕಾರಣ ಮುಚ್ಚಳಿಕೆ ಇಲ್ಲದೇ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ನೀರಿನ ಟ್ಯಾಂಕ್, ವಿದ್ಯಾರ್ಥಿಗಳ ಹಾಗೂ ಗ್ರಾಮದ ಮಕ್ಕಳ ಪ್ರಾಣಕ್ಕೆ ಕುತ್ತು ತಂದಿದೆ.

ಅಷ್ಟೇ ಅಲ್ಲದೇ ಈ ಶಾಲೆಯಲ್ಲಿ ಶೌಚಾಲಯ ಇದ್ದು ಇಲ್ಲದಂತಿದೆ. ಅದಕ್ಕೆ ಸಾಕ್ಷಿ ನೀವು ನೋಡುತ್ತಿರುವ ಈ ದೃಶ್ಯಗಳು. ವಿದ್ಯಾರ್ಥಿಗಳು ಶೌಚಕ್ಕಾಗಿ ತಮ್ಮ ಮನೆಗಳಿಗೆ ಅಥವಾ ಬಯಲಿಗೆ ಹೋಗುವ ದುಸ್ಥಿತಿ ಇದೆ ಅಂತಾರೆ ಗ್ರಾಮಸ್ಥರು. ಈ ಬಗ್ಗೆ ಯಮನೂರ ಗ್ರಾಮಸ್ಥ ಪ್ರಕಾಶ ಸರಾವರಿ ಹೇಳಿದ್ದು ಹೀಗೆ...

ಇನ್ನು ಮೇ 16 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಈಗಾಗಲೇ ಅಧಿಕಾರಿಗಳು ಶಾಲೆಯಲ್ಲಿನ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಬೇಕಿತ್ತು. ಇದುವರೆಗೂ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಯಮನೂರ ಪಿ ಡಿ ಓ ಗಮನಕ್ಕೆ ತಂದರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಮಾತಿನಂತೆ ನಡೆದುಕೊಳ್ತಾರಾ ಅಧಿಕಾರಿಗಳು ಎಂಬುದನ್ನು ಕಾದು ನೋಡಬೇಕಿದೆ.

Edited By : Somashekar
Kshetra Samachara

Kshetra Samachara

14/05/2022 03:27 pm

Cinque Terre

44.15 K

Cinque Terre

0

ಸಂಬಂಧಿತ ಸುದ್ದಿ