ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸ್ವಲ್ಪ ವಿಷ ಕೊಟ್ಟಿದ್ರೆ ಚೆನ್ನಾಗಿರುತ್ತಿತ್ತು

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಸಿಬಿಐ ತನಿಖೆ ಇಂದು ಕೂಡ ಮುಂದುವರೆದಿದೆ. ‌

ಉಪನಗರ‌ ಪೊಲೀಸ್ ಠಾಣೆಗೆ ಆಗಮಿಸಿದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ವಿಚಾರಣೆ ಎದುರಿಸಿದ್ದಾರೆ.

ಇತ್ತ ಸಿಬಿಐ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರ ವಿಚಾರಣೆಯನ್ನು ಕೂಡ ತೀವ್ರಗೊಳಿಸಿದೆ. ನಿನ್ನೆ ನ್ಯಾಯಾಲಯದಿಂದ ಸಿಬಿಐ ಅಧಿಕಾರಿಗಳು ಇಂಡಿಯನ್ನು ತಮ್ಮ ವಶಕ್ಕೆ ಪಡೆದಿದ್ದರು.

ಹಂತಕರಿಗೆ ಕಂಟ್ರಿ ಪಿಸ್ತೂಲ್​​ ಪೂರೈಸಿದ ಆರೋಪಿಗಳು ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪರಸ್ಪರ ಎದುರು ಕೂರಿಸಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ವಿಚಾರಣೆ ಮುಗಿಸಿ ಹೊರ ಬಂದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ, ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆ ಚಂದ್ರಶೇಖರ ಇಂಡಿ ಅರೆಸ್ಟ್​​ ಆಗಿದ್ದು, ದೀರ್ಘಕಾಲದ ವಿಚಾರಣೆ ನಡೆಯುತ್ತಿದೆ.

ನಿಮ್ಮ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜೀರ್ಣಿಸಿಕೊಳ್ಳದಂತಹ ವಿಷಯ ಇದೆ. ಹತ್ಯೆಗೆ ಸ್ಕೆಚ್ ಹಾಕುವ ಬದಲು ಸ್ವಲ್ಪ ವಿಷ ನೀಡಿದ್ರೆ ನಡೆಯುತ್ತಿತ್ತು ಎಂದರು.

Edited By : Manjunath H D
Kshetra Samachara

Kshetra Samachara

16/12/2020 01:04 pm

Cinque Terre

77.56 K

Cinque Terre

0

ಸಂಬಂಧಿತ ಸುದ್ದಿ