ಹುಬ್ಬಳ್ಳಿ: ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ ಕಾಲುವೆಗೆ ಗ್ರೀನ್ ಮ್ಯಾಟ್ ನಿಂದ ಸುಂದರಗೊಂಡಿದ್ದು, ಕೊಳೆಯಾಗಿದ್ದ ಕಾಲುವೆಗೆ ಕಳೆ ಬಂದಿದೆ.
ಹೌದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಗರದ ಜಿಮ್ಖಾನ್ ಮೈದಾನದಲ್ಲಿ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಅವರ ಸಾಗುವ ಮಾರ್ಗವನ್ನು ಶೃಂಗರಿಸಲಾಗಿದೆ. ಇನ್ನು ಸವಾಯಿ ಗಂಧರ್ವ ಹಾಲ್ ಬಳಿ ಇರುವ ರಾಜ ಕಾಲುವೆಗೆ ರಾಜ ಮರ್ಯಾದೆ ಸಿಕ್ಕಿದೆ. ಕಾರ್ಯಕ್ರಮಕ್ಕೆ ಬರುವವರು ಇಲ್ಲಿನ ರಾಜ ಕಾಲುವೆ ಮಾಯವಾಗಿದೆಂದು ಲೇವಡಿ ಮಾಡುವಂತಾಗಿದೆ.
ವಿಷಯವೇನಂದರೆ ಸದಾ ಎಲ್ಲೆಂದರಲ್ಲಿ ಕೊಚ್ಚೆ ನಿಂತು ಗಬ್ಬು ನಾರುತ್ತಿತ್ತು. ಆದ್ರೆ ಇದೀಗ ಆ ರಾಜ ಕಾಲುವೆಯ ರೂಪವೇ ಬದಲಾಗಿದರ. ಸುತ್ತಲೂ ಬರುವ ಗಣ್ಯರಿಗೆ ಕಾಲುವೆ ಕಾಣದಂತೆ ಅಲ್ಲಲ್ಲಿ ಮೂರಿದು ಬಿದ್ದಿದ್ದ ತಡೆಗೋಡೆ ನಿರ್ಮಿಸಿ, ಸುತ್ತಲೂ ಗ್ರೀನ್ ಮ್ಯಾಟ್ ಹಾಕಿ ಕೃತಕ ಹೂವು ಹಾಕಿ ಸುಂದರಗೋಳಿಸಿದ್ದಾರೆ. ನೋಡುಗರನ್ನು ಆಕರ್ಷಿಸುತ್ತಿದೆ.
ಈ ಹಿಂದೆ ಬಿದ್ದಿದ್ದ ತಡೆಗೋಡೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ನಿಂತಿದ್ದ ಕೊಚ್ಚೆ ಸ್ವಚ್ಚತೆಗೆ ದೂರುಗಳನ್ನು ಕೂಡ ನೀಡಿದ್ದರು. ಆದ್ರೆ ಇದೀಗ ಈ ಭಾಗದ ಚಿತ್ರಣವೇ ಬದಲಾಗಿದ್ದು, ಸ್ಥಳೀಯರಲ್ಲಿ ಖಷಿಯೋ ಖುಷಿಯಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
26/09/2022 02:20 pm