ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 15 ಲಕ್ಷ ರೂ. ವೆಚ್ಚದ ಫೀವರ್ಸ್ ಅಳವಡಿಕೆ ಕಾಮಗಾರಿಗೆ ಶೆಟ್ಟರ್ ಚಾಲನೆ

ಹುಬ್ಬಳ್ಳಿ: ವಿದ್ಯಾನಗರದ ಪೊಲೀಸ್ ಠಾಣೆ ಹತ್ತಿರದ ಚಿಕ್ಕವೀರಯ್ಯ ಉದ್ಯಾನವನಕ್ಕೆ ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಫೀವರ್ಸ್ ಅಳವಡಿಕೆ ಕಾಮಗಾರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸುಮಾರು ದಿನಗಳಿಂದ ಅವ್ಯವಸ್ಥೆಗೆ ಸಾಕ್ಷಿಯಾಗಿದ್ದ ವಿದ್ಯಾನಗರದ ಉದ್ಯಾನವನಕ್ಕೆ ಕಾಯಕಲ್ಪ ದೊರೆತಂತಾಗಿದೆ. ಪಾಲಿಕೆ ಸದಸ್ಯರಾದ ರೂಪಾ ದಯಾನಂದ ಶೆಟ್ಟಿ ಅವರು ತಮ್ಮ ವಾರ್ಡಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಉದ್ಯಾನವನದ ಅಭಿವೃದ್ಧಿಗೆ ಮುಂದಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಗಾರ್ಡನ್‌ಗೆ ಫೀವರ್ಸ್ ಅಳವಡಿಕೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.

ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಗೆ ಇಂದು ಭೂಮಿ ಪೂಜೆ ನೆರವೇರಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಧರ ಕಂದಗಲ್, ಕಾರ್ತಿಕ ಹೊನ್ನಾಪೂರ, ಸುಧೀರ್ ಇಂಗಳಗಿ, ಮೇಘನಾ ಸಿಂಧೆ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿ ಗುದ್ದಲಿ ಪೂಜೆ ನೆರವೇರಿಸಿದರು.

Edited By :
Kshetra Samachara

Kshetra Samachara

13/07/2022 04:08 pm

Cinque Terre

35.66 K

Cinque Terre

1

ಸಂಬಂಧಿತ ಸುದ್ದಿ