ನವಲಗುಂದ : ನವಲಗುಂದ ತಾಲೂಕಿನ ಅರಹಟ್ಟಿ ಗ್ರಾಮದಲ್ಲಿ “ಜಲ ಜೀವನ್ ಮಿಷನ್” ಯೋಜನ ಅಡಿಯಲ್ಲಿ ಸುಮಾರು 64 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕುಡಿಯುವ ನೀರಿನ ಪೈಪಲೈನ್ ಅಳವಡಿಸುವುದು ಮತ್ತು ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವ ಕಾಮಗಾರಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಂದ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಇನ್ನು ಇದೇ ವೇಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಉದ್ಘಾಟಿಸಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ಎಸ್.ಬಿ.ದಾನಪ್ಪಗೌಡರ್, ಬಿಜೆಪಿ ಮುಖಂಡರಾದ ಸಿದ್ದಣ್ಣ ಕಿಟಗೇರಿ, ಬಸವರಾಜ ಹುಬ್ಬಳ್ಳಿ, ಭೀಮನಗೌಡ ಪಾಟೀಲ್, ದ್ಯಾವಕ್ಕ ಎಸ್ ಪಿಡ್ಡನ್ನವರ್, ತೋಟಪ್ಪ ಹಡಗಲಿ, ಅಣ್ಣಪ್ಪ ಮಡಿವಾಳರ್, ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
13/04/2022 11:54 am