ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಇತರ ಬೆಲೆ ಏರಿಕೆ ಮಾಡಿರುವ ಸರಕಾರದ ವಿರುದ್ಧ
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಪ್ರತಿಭಟನಾ ರ‍್ಯಾಲಿ ಮಾಡಿದ ಅವರು, ಆಟೋ ರಿಕ್ಷಾಗೆ ಬಳಸುವ ಎಲ್.ಪಿ.ಜಿ, ಪೆಟ್ರೋಲ್, ಗೃಹ ಬಳಕೆ ಸಿಲಿಂಡರ್ ಮತ್ತು ಆರ್.ಟಿ.ಓ ಆಟೋ ನೋಂದಣಿಯ ಬೆಲೆ ಹೆಚ್ಚಳ ಮಾಡಿರುವುದರಿಂದ ನಾವೆಲ್ಲರೂ ಹೇಗೆ ಬದುಕಬೇಕು ಎಂದು ಸರಕಾರದ ವಿರುದ್ಧ ಕಿಡಿ ಕಾರಿದರು. ತಕ್ಷಣವೇ ಎಲ್ಲಾ ಬೆಲೆಗಳು ಇಳಿಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ತಹಶಿಲ್ದಾರರ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
Kshetra Samachara
04/04/2022 01:59 pm