ಕಲಘಟಗಿ: ಉದ್ಯೋಗ ಖಾತ್ರಿ ಗ್ರಾಮೀಣ ಕೂಲಿಕಾರ ಸಂಘಟನೆಯಿಂದ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಚಳುವಳಿಯನ್ನು ಶುಕ್ರವಾರ ನಡೆಸಲಾಯಿತು.
ಪಟ್ಟಣದ ಅಂಚೆ ಕಚೇರಿ ಎದರು ಗ್ರಾಮೀಣ ಕೂಲಿಕಾರರು ಸೇರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಾಮಾಜಿಕ ಭದ್ರತೆ ನೀಡ ಬೇಕು,ಈಗಿರುವ ಕನಿಷ್ಠ ನೂರು ದಿನಗಳ ಕೆಲಸವನ್ನು ಎರಡನೂರು ದಿನಗಳಿಗೆ ಹೆಚ್ಚಿಸ ಬೇಕು ಹಾಗೂ ವೇತನವನ್ನು ಎರಡು ನೂರು ರೂಪಾಯಿಗಳಿಂದ ಆರನೂರು ರೂಪಾಯಿಗಳಿಗೆ ಹೆಚ್ಚಿಸ ಬೇಕು ಎಂದು ಪತ್ರ ಚಳುವಳಿ ಮಾಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಂಗಮ್ಮ ಸವಣೂರ,ದಾವಲಸಾಬ ನಾನಾಪುರಿ,ಬೇಗಂ ಕುಂದಗೋಳ,ಬಸಪ್ಪ ಬಿದರಗಡ್ಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/09/2021 01:13 pm