ಕಲಘಟಗಿ: ಮತಕ್ಷೇತ್ರದ ಅಳ್ನಾವರ ಭಾಗದ ಹುಲ್ಲಿಕೇರಿ (ಇಂದಿರಮ್ಮನ) ಕೆರೆಗೆ ಸಣ್ಣ ನೀರಾವರಿ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಶಾಸಕರಾದ ಸಿ.ಎಮ್. ನಿಂಬಣ್ಣವರ ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು.
ಸಚಿವ ಜೆ.ಸಿ. ಮಾಧುಸ್ವಾಮಿ ಒಡೆದ ಕೆರೆಯನ್ನು ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ,ಒಡೆದು ಹೋದ ಕೆರೆಯ ವೆಸ್ಟವೆರ್ ಹಾಗೂ ಬಿದ್ದು ಹೋದ ನೀರು ಹಾಯಿಸುವ ಕೆನಾಲ್ ದುರಸ್ತಿ ಆದಷ್ಟು ಬೇಗನೆ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
Kshetra Samachara
08/09/2021 08:50 pm