ಕಲಘಟಗಿ:ನೂತನ ಬಸ್ ಘಟಕ ಪ್ರಾರಂಭವಾದರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಬಸ್ ಸಮಸ್ಯೆ ತಪ್ಪುತ್ತಿಲ್ಲ ಹೀಗಾದರೆ ಹೇಗೆ ಎಂದು ಶಾಸಕ ಸಿ ಎಂ ನಿಂಬಣ್ಣವರ ಡಿಪೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವರು ಸ್ಥಳೀಯ ತಾ ಪಂ ಸಭಾ ಭವನದಲ್ಲಿ ತಾಲೂಕಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ,ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪಾಲಕರು ನಿತ್ಯ ಪ್ರತಿಭಟನೆ ಮಾಡುತ್ತಿದ್ದಾರೆ.ಪರೀಕ್ಷೆಗಳು ಹತ್ತಿರ ಬರುತ್ತಿವೆ.ಶಾಲಾ ಕಾಲೇಜುಗಳಿಗೆ ತೆರಳಲು ಬೆಳಿಗ್ಗೆ ಹಾಗೂ ಸಂಜೆ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಹಾಗೂ ನೂತನ ಡಿಪೋ ಸೇವೆಗೆ ಸ್ಥಳೀಯ ನೌಕರರನ್ನು ನಿಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾ ಪಂ ಅಧ್ಯಕ್ಷೆ ಸುನೀತಾ ಮ್ಯಾಗೀನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ತಾ ಪಂ ಇಒ ಎಂ ಎಸ್ ಮೇಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
26/02/2021 01:52 pm