ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಟೆಂಡರ್‌ ಶ್ಯೂರ್ ರಸ್ತೆ ಕಾಮಗಾರಿ ಕಳಪೆ; ರಸ್ತೆಯಲ್ಲೇ ಸಸಿ ನೆಟ್ಟ ಕಾಂಗ್ರೆಸ್!

ಹಳೆ ಡಿಎಸ್ಪಿ ವೃತ್ತದಿಂದ ಮುರುಘಾಮಠದವರೆಗೆ ನಡೆದಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಈ ರಸ್ತೆಯಲ್ಲಿ ಸಸಿ ನೆಟ್ಟು ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದ ಡಿಪೊ ಸರ್ಕಲ್ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಯಲ್ಲಿ ಸಸಿ ನೆಟ್ಟು ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು.

ಹಳೆ ಡಿಎಸ್ಪಿ ವೃತ್ತದಿಂದ ಮುರುಘಾಮಠದವರೆಗೆ ಟೆಂಡರ್ ಶ್ಯೂರ್ ರಸ್ತೆ ಎಂದು ಹೇಳಿ ಕೋಟಿಗಟ್ಟಲೇ ಖರ್ಚು ಮಾಡಲಾಗಿದೆ. ಆದರೆ, ರಸ್ತೆಯ ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ. ಈಗಾಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

Edited By :
Kshetra Samachara

Kshetra Samachara

12/07/2022 06:14 pm

Cinque Terre

60.04 K

Cinque Terre

5

ಸಂಬಂಧಿತ ಸುದ್ದಿ