ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಪಾಲಿಕೆ ಕಚೇರಿಗೆ ದಿಢೀರ್ ಹೆಜ್ಜೆ ಇಟ್ಟ ಇಟ್ನಾಳ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಅವರು ಶುಕ್ರವಾರ ಧಾರವಾಡ ಪಾಲಿಕೆ ಕಚೇರಿಯ ವಿವಿಧ ವಿಭಾಗಕ್ಕೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಯುಕ್ತರು ದಿಢೀರನೆ ಬಂದಿದ್ದರಿಂದ ಸಿಬ್ಬಂದಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

ಸಾರ್ವಜನಿಕರು ಜನನ-ಮರಣ ಪ್ರಮಾಣ ಪತ್ರಕ್ಕೆ ಸಲ್ಲಿಸುವ ಅರ್ಜಿಗಳ ಪರಿಶೀಲನೆ ಮತ್ತು ಪ್ರಮಾಣ ಪತ್ರ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ನಿತ್ಯ ಕಚೇರಿಗೆ ಬರುವ ಸಾರ್ವಜನಿಕರ ಅರ್ಜಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅನಗತ್ಯವಾಗಿ ಸಾರ್ವಜನಿಕರಿಗೆ ಕಚೇರಿಗೆ ಅಲೇದಾಟ ತಪ್ಪಿಸಲು ಪ್ರತಿಯೊಬ್ಬ ಸಿಬ್ಬಂದಿ ಕಾಳಜಿವಹಿಸಬೇಕು. ಪಾಲಿಕೆ ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರದಲ್ಲಿಯೇ ಹಾಜರಿದ್ದು ಕೆಲಸ ಮಾಡಬೇಕು. ಅನಗತ್ಯವಾಗಿ ಪಾಲಿಕೆ ಮುಖ್ಯ ಕಚೇರಿಗೆ ಬರುವುದು ಹಾಗೂ ಕಟ್ಟಡ ಪರವಾನಿಗಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸೇವೆಯಲ್ಲಿ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಖಡಕ್ ಸೂಚನೆ ನೀಡಿದರು.

ಇದೇ ವೇಳೆ ಪಾಲಿಕೆ ಕಚೇರಿಯ ಎಲ್ಲ ಸೇವೆಗಳ ಕಡತಗಳನ್ನು ಖುದ್ದು ತಾವೇ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಪಾಲಿಕೆ ಸೇವೆ ಪಡೆಯಲು ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

ಪಾಲಿಕೆ ವಲಯ ಕಚೇರಿ 3 ರ ಸಹಾಯಕ ಆಯುಕ್ತರಾದ ಆರ್.ಎಂ.ಕುಲಕರ್ಣಿ, ಎಂಜಿನಿಯರ್ ವಿನಾಯಕ, ಸಿಬ್ಬಂದಿ ಅರಕೇರಿ ಸೇರಿದಂತೆ ಎಲ್ಲ ಸಿಬ್ಬಂದಿ ಹಾಜರಿದ್ದರು.

Edited By : Nagesh Gaonkar
Kshetra Samachara

Kshetra Samachara

25/09/2020 06:39 pm

Cinque Terre

19.89 K

Cinque Terre

3

ಸಂಬಂಧಿತ ಸುದ್ದಿ