ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಹಣೆಪಟ್ಟಿ ಕಟ್ಟಿಕೊಂಡಿರುವ ಹು-ಧಾ ಮಹಾನಗರದಲ್ಲಿ ಮುಕ್ತಾಯಗೊಂಡು ಚಾಲನೆ ಪಡೆದುಕೊಂಡ ಒಂದೇ ಒಂದು ಉದ್ಯಾನವನಕ್ಕೆ ಕೋಟಿ ಕೋಟಿ ಹಣ ವೆಚ್ಚ ಮಾಡಿರುವುದು ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲಿನ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಹೌದು... ವಾಣಿಜ್ಯ ನಗರಿ ಹುಬ್ಬಳ್ಳಿಯ ಇಂದಿರಾ ಗಾಜಿನಮನೆ. ಕಳೆದ ಹಲವು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿರುವ ಈ ಉದ್ಯಾನವನ ಅಭಿವೃದ್ಧಿಗಾಗಿ ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 30 ಕೋಟಿಗೂ ಅಧಿಕ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ.
ಕೇವಲ ಒಂದೇ ಒಂದು ಉದ್ಯಾನವನದ ಅಭಿವೃದ್ದಿಗಾಗಿ ಬರೋಬ್ಬರಿ 30 ಕೋಟಿಗೂ ಅಧಿಕಹಣ ವ್ಯಯ ಮಾಡಿರೋದು ಇದೀಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೇವಲ ಒಂದೇ ಒಂದು ಉದ್ಯಾನವನಕ್ಕೆ ಈ ಪ್ರಮಾಣ ಹಣ ಖರ್ಚು ಮಾಡಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೇವಲ ಒಂದೇ ಒಂದು ಉದ್ಯಾನವನಕ್ಕೆ ಇಷ್ಟೊಂದು ಹಣ ಖರ್ಚು ಮಾಡೋ ಅಗತ್ಯವಿತ್ತಾ ಎನ್ನುವ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ.
ಉದ್ಯಾನವನದ ಬಳಿ ನಿರ್ಮಾಣ ಮಾಡಲಾಗಿರುವ ಫಜಲ್ ಪಾರ್ಕಿಂಗ್ ಗೆ 4.59 ಕೋಟಿ, ಪುಠಾಣಿ ರೈಲಿಗೆ 4.2 ಕೋಟಿ, ಸಂಗೀತ ಕಾರಂಜಿಗೆ 4.57 ಕೋಟಿ ಹೀಗೆ ಪ್ರತಿಯೊಂದಕ್ಕೂ ಕೋಟಿ ಕೋಟಿಯಂತೆ ಬರೋಬ್ಬರಿ 30 ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರೋ ಕಾಮಗಾರಿಗಳಲ್ಲಿ ಕೋಟಿ ಕೋಟಿ ಹಣ ದುರ್ಬಳಕೆಯಾಗುತ್ತಿದೆಯಾ ಅಥವಾ ಸಮರ್ಪಕವಾಗಿ ನಿರ್ವಹಣೆಯಾಗುತ್ತಿದೆಯಾ ಎಂಬುದಕ್ಕೆ ಸರ್ಕಾರವೇ ಉತ್ತರ ನೀಡಬೇಕಿದೆ. ಅದೇನೇ ಇರಲಿ ಸಾರ್ವಜನಿಕರ ಹಣ ದುರುಪಯೋವಾಗದೇ ನಗರದ ಅಭಿವೃದ್ದಿಗೆ ಪೂರಕವಾಗುವಂತೆ ಜನಸಾಮಾನ್ಯರ ಅನುಕೂಲಕ್ಕಾಗಿ ಸರಿಯಾಗಿ ವಿನಿಯೋಗವಾಗಲಿ ಎನ್ನುವುದು ನಮ್ಮ ಆಶಯ.
Kshetra Samachara
27/06/2022 03:52 pm