ಅಳ್ನಾವರ: ದಾಂಡೇಲಿಯ ಕಾಳಿ ನದಿಯ ನೀರನ್ನು ಹಳಿಯಾಳ ಮಾರ್ಗವಾಗಿ ಅಳ್ನಾವರ ಪಟ್ಟಣಕ್ಕೆ ತರುವಲ್ಲಿ ಹಲವರ ಶ್ರಮವಿದೆ. ಇದು ನಿನ್ನೆ ಮೊನ್ನೆಯ ಹೋರಾಟವಲ್ಲ. ಸುಮಾರು ಒಂದು ದಶಕದ ನಿರಂತರ ಹೋರಾಟದ ಫಲ. ಇದರಲ್ಲಿ ಪಕ್ಷಾತೀತವಾಗಿ ರಾಜಕೀಯ ನಾಯಕರನ್ನ, ಹಿರಿಯರನ್ನ, ಯುವಕರನ್ನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಸಿ. ಎಂ. ನಿಂಬಣ್ಣವರ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರರು, ಸರ್ಕಾರಿ ಇಂಜಿನಿಯರ್‌ಗಳು ನಮಗೆ ತೃಪ್ತಿಯಾಗುವ ರೀತಿಯಲ್ಲಿ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಒಂದು ಅಧಿಕೃತ ದಿನಾಂಕವನ್ನು ಗೊತ್ತು ಪಡಿಸಿ, ಗಂಗೆ ಅಳ್ನಾವರ ಪ್ರವೇಶ ಮಾಡುತ್ತಿರುವುದನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗುವುದು ಎಂದರು.
ಇವತ್ತು ಪರಿಕ್ಷಾರ್ಥವಾಗಿ ಅಳ್ನಾವರ ಪಟ್ಟಣಕ್ಕೆ ಪೈಪ್‌ಲೈನ್ ಮೂಲಕ ನೀರು ಸುಗಮವಾಗಿ ಪ್ರವೇಶ ಮಾಡಿದೆ. ನೀರು ಪಟ್ಟಣ ಪ್ರವೇಶ ಮಾಡಿದ ಮೇಲೆ ಆಡಳಿತ ವರ್ಗದೊಂದಿಗೆ ಚರ್ಚಿಸಿ ಎಷ್ಟು ದಿನಗಳಿಗೊಮ್ಮೆ ಶುದ್ಧ ಕುಡಿಯುವ ನೀರನ್ನ ಪ್ರತಿ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಒಟ್ಟಾರೆಯಾಗಿ ಅಳ್ನಾವರ ಪಟ್ಟಣದ ದೀರ್ಘಕಾಲದ ಕನಸು ಎಲ್ಲರ ಪ್ರಯತ್ನದಿಂದ ನನಸಾಗುತ್ತಿರುವುದನ್ನು ಕಂಡು ತುಂಬಾ ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ಪ.ಪಂಚಾಯಿತಿ ಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು.
Kshetra Samachara
06/04/2022 12:25 pm