ಹುಬ್ಬಳ್ಳಿ: ದೇಶದ ಪ್ರಾಚೀನ ಪದ್ದತಿಗಳಲ್ಲಿ ಆಯುರ್ವೇದವು ಅತ್ಯಂತ ಪುರಾತನವಾದದ್ದು. ಆದರೆ ಭಾರತೀಯರಿಗೆ ಇದರ ಕುರಿತು ಕೀಳರಿಮೆ ಇದೆ. ಹೆಚ್ಚಿನವರು ಇಂಗ್ಲೀಷ್ ಔಷಧಕ್ಕೆ ಮಾರುಹೊಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಡಾ. ಕೆ. ಎಸ್ ಶರ್ಮಾ ಸಮೂಹ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಆಯುರ್ವೇದ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಜಗತ್ತು ಯೋಗ, ಆರ್ಯುವೇದದ ನೆರಳಿನಿಂದ ಭಾರತವನ್ನು ನೋಡತ್ತಿದೆ. ಆದರೆ ನಮಗೆ ಪಾಶ್ಚಾತ್ಯ ಸಂಸ್ಕ್ರತಿಯ ಒಲವಿನಿಂದ ನಮ್ಮತನ ಕಾಣೆಯಾಗುತ್ತಿದೆ. ಪ್ರತಿಯೊಬ್ಬರು ಮಾತೃಭಾಷೆಯನ್ನು ಅಧ್ಯಯನ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ AIIMS ನಲ್ಲಿ ಆರ್ಯುವೇದದ ವಿಷಯವನ್ನು ಅಳವಡಿಸಿದ್ದು ಮತ್ತು ದೇಶದಲ್ಲಿ ಆಯುರ್ವೇದ ವಿಶ್ವವಿದ್ಯಾಲಯವನ್ನು ತೆರೆಯಲು ಚಿಂತನೆ ನಡೆಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕೆ.ಎಸ್ ಶರ್ಮಾ ವಹಿಸಿಕೊಂಡಿದ್ದು, ಶಾಸಕ ಅಮೃತ ದೇಸಾಯಿ ಮತ್ತು ಮೋಹನ ನಿಂಬಿಕಾಯಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
Kshetra Samachara
24/04/2022 11:09 pm