ಧಾರವಾಡ: ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ತಮ್ಮ ಜನ್ಮದಿನದಂದು ದಂಪತಿ ಸಮೇತ ನೇತ್ರದಾನಕ್ಕೆ ಸಹಿ ಮಾಡಿ ಗಮನಸೆಳೆದಿದ್ದರು. ಇದಕ್ಕೆ ಪ್ರೇರಣೆ ನೀಡಿದ್ದೇ ನಟ ಪುನೀತ್ ರಾಜಕುಮಾರ ಎಂದು ಸ್ವತಃ ಶಾಸಕ ಅಮೃತ ದೇಸಾಯಿ ಹೇಳಿದ್ದರು.
ಇಂದು ಪುನೀತ್ ಜನ್ಮದಿನದ ಅಂಗವಾಗಿ ಧಾರವಾಡದ ಪದ್ಮಾ, ಶ್ರೀನಿವಾಸ ಚಿತ್ರಮಂದಿರಕ್ಕೆ ಬಂದ ಶಾಸಕ ಅಮೃತ ಅವರ ಧರ್ಮಪತ್ನಿ ಪ್ರಿಯಾ ಅವರು, ಮರಣಾನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವಂತೆ ಯುವಕರನ್ನು ಪ್ರೇರೇಪಿಸಿದರು. ಅದರಂತೆ ಅನೇಕ ಯುವಕರು ಅಪ್ಪು ಅವರ ಜನ್ಮದಿನದಂದೇ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಕರುನಾಡ ರಾಜರತ್ನ ಅಪ್ಪು ಫ್ಯಾನ್ಸ್ ಅಸೋಸಿಯೇಶನ್ ವತಿಯಿಂದ ಈ ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಪಾಲ್ಗೊಂಡ ಪ್ರಿಯಾ ದೇಸಾಯಿ ಅವರು ಅನೇಕರು ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು.
Kshetra Samachara
18/03/2022 07:28 am