ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲಘಟಗಿ ತಹಶೀಲ್ದಾರ ಸೇರಿದಂತೆ ಇತರ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಕೇಂದ್ರ ಸಚಿವ ಜೋಶಿ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ವಿವಿಧ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ನಡೆಯುತ್ತಿರುವಷ್ಟು ಭ್ರಷ್ಟಾಚಾರ ಬೇರೆ ಎಲ್ಲೂ ನಡೆಯುತ್ತಿಲ್ಲ. ಅಲ್ಲಿನ ಸಿಬ್ಬಂದಿ ಜನರಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಯಾವುದೇ ಕೆಲಸಕ್ಕೆ ಹೋದರೂ ಹಣ ಕೊಡಬೇಕಾಗಿದೆಯಂತೆ. ನೀವು ಇರುವುದು ಜನರ ಸಲುವಾಗಿಯೋ ಅಥವಾ ಐಷಾರಾಮಿ ಜೀವನ ನಡೆಸೋದಕ್ಕೋ? ಎಂದು ಕಲಘಟಗಿ ತಹಶೀಲ್ದಾರ ಯಲ್ಲಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ದುಮ್ಮವಾಡ ಎಂಬ ಆರ್‌ಐ ಹೆಸರು ಬಹಳ ಕೇಳಿ ಬರುತ್ತಿದೆ. ಅವರಿಗೆ ಎಚ್ಚರಿಕೆಯಿಂದ ಕೆಲಸ ಮಾಡಲು ಹೇಳಿ ಎಂದು ಜೋಶಿ ಎಚ್ಚರಿಕೆ ನೀಡಿದರು.

ಇನ್ನು ನಗರಾಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಮಂಜುಳಾ ಮೇಲೆ ತೀವ್ರ ಗರಂ ಆದ ಜೋಶಿ, ಹುಬ್ಬಳ್ಳಿ, ಹೊಸೂರು ಮೇಲ್ಸೇತುವೆಯಿಂದ ಚೆನ್ನಮ್ಮ ವೃತ್ತದವರೆಗೆ ಫ್ಲೈ ಓವರ್ ಮಾಡಿಸಲಾಗುತ್ತಿದೆ. ಅದಕ್ಕಾಗಿ ಬಿಆರ್‌ಟಿಎಸ್‌ ಬಸ್ ನಿಲ್ದಾಣ ತೆರವು ಮಾಡಲು ಮಂಜುಳಾ ಬಿಡುತ್ತಿಲ್ಲ. ಮಂಜುಳಾ ಏನು ಹಿಟ್ಲರ್ ಅಲ್ಲ. ನಾನು ಹೇಳಿದ್ರೂ ನಾಟಕ ಮಾಡುತ್ತಿದ್ದಾರಾ? ಫ್ಲೈ ಓವರ್ ನಿರ್ಮಾಣದ ವೇಳೆ ಬಸ್ ನಿಲ್ದಾಣ ತೆರವುಗೊಳಿಸದಿದ್ರೆ ನಾನು ಅದನ್ನು ನೋಡಿಕೊಳ್ಳುತ್ತೇನೆ. ಅವರು ಅರೆಸ್ಟ್ ಮಾಡೋದಾದ್ರೆ ನನ್ನ ಅರೆಸ್ಟ್ ಮಾಡಿಸಲಿ. ಮಂಜುಳಾ ಸಭೆಗೆ ಕರೆದರೆ ನೀವು ಹೋಗಬೇಡಿ. ನನ್ನ ನಿರ್ದೇಶನವನ್ನಷ್ಟೇ ಕೇಳಿ. ಜನಪ್ರತಿನಿಧಿ ಎಂದರೆ ಏನಂತ ತಿಳಿದುಕೊಂಡಿದ್ದಾರೆ ಎಂದು ಹೆದ್ದಾರಿ ಪ್ರಾಧಿಕಾರದ ಹುರಕಡ್ಲಿ ಅವರಿಗೆ ಜೋಶಿ ಸೂಚನೆ ನೀಡಿದರು.

ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಮೇಯರ್ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಎಸ್‌ಪಿ ಲೋಕೇಶ ಜಗಲಾಸರ್, ಮಹಾನಗರಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

02/10/2022 11:53 am

Cinque Terre

34.93 K

Cinque Terre

17

ಸಂಬಂಧಿತ ಸುದ್ದಿ