ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರೈತರು ಸೂಟು, ಬೂಟು ಹಾಕಿಕೊಳ್ಳುವಂತಾಗಬೇಕು; ಬಿ.ಸಿ.ಪಾಟೀಲ

ಧಾರವಾಡ: ಕೃಷಿ ಕೆಟ್ಟದ್ದು ಎಂಬ ಕೀಳರಿಮೆ ಮೂಡುತ್ತಿದೆ. ಆದರೆ, ಕೃಷಿಯಲ್ಲಿ ನಷ್ಟ ಇಲ್ಲ. ಅದರಲ್ಲಿ ಲಾಭ ಇದೆ ಎಂಬುದನ್ನು ಈಗಾಗಲೇ ಅನೇಕರು ತೋರಿಸಿಕೊಟ್ಟಿದ್ದು, ಅವರಂತೆಯೇ ಇತರ ರೈತರು ಕೂಡ ಕೃಷಿಯಲ್ಲಿ ಸಾಧನೆ ಮಾಡಿ ಸೂಟು, ಬೂಟು ಹಾಕಿಕೊಳ್ಳುವಂತಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಹರಕಲು ಮನೆಯಲ್ಲಿ ಇರಬಾರದು. ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿ ಅವರೂ ಕೂಡ ಇತರರಂತೆ ಸರಿಸಮನಾಗಿ ಬದುಕುವಂತಾಗಬೇಕು. ವೈಜ್ಞಾನಿಕವಾಗಿ ರೈತರು ಚಿಂತನೆ ಮಾಡಬೇಕು. ಆಧುನಿಕ ಉಪಕರಣಗಳನ್ನು ಕೃಷಿಯಲ್ಲಿ ಬಳಕೆ ಮಾಡಬೇಕು ಎಂದರು.

1965ರವರೆಗೂ ನಮ್ಮ ದೇಶದಲ್ಲಿ ಆಹಾರದ ಕೊರತೆ ಇತ್ತು. ಹಸಿರು ಕ್ರಾಂತಿ ಆದಮೇಲೆ 138 ಕೋಟಿ ಜನತೆಗೆ ಆಹಾರ ಉತ್ಪಾದನೆ ಮಾಡಿ ಇದೀಗ ಹೊರ ದೇಶಕ್ಕೂ ಆಹಾರ ರಫ್ತು ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ನಮ್ಮ ರಾಜ್ಯ 158 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಿದೆ. ರೈತರಿಗೆ ರಾಜ್ಯ ಸರ್ಕಾರದಿಂದ ರೈತರಿಗೆ 10 ಲೀಟರ್ ಸಬ್ಸಿಡಿ ರೂಪದಲ್ಲಿ ಡೀಸೆಲ್ ಕೊಡಲು ಕೂಡ ಸರ್ಕಾರ ಈಗಾಗಲೇ ನಿರ್ಧರಿಸಿದ್ದು, ಮುಂದಿನ ತಿಂಗಳು ರೈತರ ಬ್ಯಾಂಕ್ ಖಾತೆಗೆ ಆ ಹಣವನ್ನೂ ಜಮಾ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ಎರಡ್ಮೂರು ವರ್ಷ ಕೃಷಿ ಮೇಳ ಆಗಿರಲಿಲ್ಲ. ಈ ವರ್ಷ ಅನ್ನದಾತರು ಖುಷಿಯಿಂದಲೇ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Edited By : Somashekar
Kshetra Samachara

Kshetra Samachara

18/09/2022 06:31 pm

Cinque Terre

34.88 K

Cinque Terre

4

ಸಂಬಂಧಿತ ಸುದ್ದಿ