ಧಾರವಾಡ: ಅವರು ಬಂದಿದ್ದು ಕೇವಲ ಬೆರಳನಿಕೆಯಷ್ಟೇ ಜನ. ಆದ್ರೆ, ರೈತರ ನೂರಾರು ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ರು.
ಹೌದು! ನವಲಗುಂದ ತಾಲೂಕಿನ ಶಿರೂರು ಗ್ರಾಮದ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಸುಮಾರು ನಾಲ್ಕೈದು ಜನ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಮುಂಗಾರು ಮತ್ತು ಹಿಂಗಾರು ಬೆಳೆವಿಮೆ ನೀಡಬೇಕು, ರಾಜ್ಯದ ರೈತರಿಗೆ ಶೇ.1ರ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ನೀಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಎಲ್ಲ ರೈತರಿಗೆ ಹಿಂಗಾರು ಬಿತ್ತನೆಗೆ ಬೀಜ ವಿತರಣೆ ಮಾಡಬೇಕು ಎಂಬ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದರು.
Kshetra Samachara
21/09/2020 08:55 pm