ಹುಬ್ಬಳ್ಳಿ: ಆತ ನಾಲ್ಕು ವರ್ಷದ ಹಿಂದೆ ತನ್ನದೇ ಊರಿನ ಮೇಲ್ಜಾತಿ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದ, ಅ ಪ್ರೀತಿಗೆ ಸಾಕ್ಷಿ ಎನ್ನುವಂತೆ ಎರಡು ಮುದ್ದಾದ ಮಕ್ಕಳು ಕೂಡ ಆಗಿದ್ದವು, ಎಲ್ಲರ ಮುಂದೆ ಹುಬ್ಬೇರುವಂತೆ ಜೀವನ ಮಾಡುತ್ತಾ ಗ್ರಾಮ ಪಂಚಾಯತ ಸದಸ್ಯನಾಗಿ ಮುನ್ನುಗ್ಗುತ್ತಾ ಇರುವಾಗಲೇ ,ಬದ್ದ ವೈರಿಗಳು ಬರ್ಬರವಾಗಿ ಹತ್ಯೆ ಮಾಡಿ ಬಿಟ್ಟರು, ಇದೀಗ ಆತನ ಪತ್ನಿ ಪತಿ ಕೊಂದವರು ಬಂಧನ ಆಗಿಲ್ಲ ಎಂದು ನ್ಯಾಯಕ್ಕಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾಳೆ ಏನಿದು ಸ್ಟೋರಿ ಅಂತೀರಾ ಡೀಟೇಲ್ಸ್ ಇಲ್ಲಿದೆ ನೋಡಿ
ಹೌದು ಇದೆ ತಿಂಗಳು ನಾಲ್ಕನೇ ತಾರೀಕು ರಾತ್ರಿ 10.30 ಸುಮಾರಿಗೆ ಹತ್ತಾರು ಜನ ದುಷ್ಕರ್ಮಿಗಳು ಸೇರಿ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಠದರಿಯನ್ನ ಬೀಕರ ವಾಗಿ ಹತ್ಯೆ ಮಾಡಿದ್ದರು ಇದಾದ ಮೇಲೆ ಪೊಲಿಸರು 6 ಜನರನ್ನ ಕೂಡಾ ಬಂಧಿಸಿ ಸದ್ಯ ಜೈಲಿಗೆ ಅಟ್ಟಿದ್ದಾರೆ ಆದ್ರೂ ಕೂಡಾ ಕುಟುಂಬಸ್ಥರು ನಿಜವಾದ ಆರೋಪಿಗಳ ಬಂಧನ ಆಗಿಲ್ಲ ಎಂದು ನ್ಯಾಯಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ
ಡಿಸಿಪಿ ಸಾಹಿಲ್ ಬಾಗ್ಲ ಖುದ್ದು ಕೇಸ್ ವಿಚಾರಣೆ ಮಾಡಿದ್ದರು ಕೊಲೆಯ ಮಾಸ್ಟರ್ ಮೈಂಡ್ ಆರೋಪಿಗಳು ಈವರೆಗೂ ಬಂಧನ ಆಗಿಲ್ಲ,ಯಲ್ಲಪ್ಪ ಶಂಕ್ರಪ್ಪ ಮೇಟಿ,ರುದ್ರಪ್ಪ ಮೇಟಿ, ನಾಗರಾಜ್ ಹೆಗ್ಗನ್ನವರ್ ಇವರನ್ನ ಸ್ಥಳೀಯ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹಾಕಿ ಕೇಸ್ ನಿಂದಾ ಬಚಾವ್ ಆಗುವಂತೆ ನೋಡಿಕೊಂಡಿದ್ದಾರೆ ಎಂದು ಪತ್ನಿ ಪುಷ್ಪಾ ಹಾಗು ಸಹೋದರ ಸಂಜಯ್ ಆರೋಪಿಸುತ್ತಿದ್ದಾರೆ
ಮೊನ್ನೆ ತಾನೆ ಕಮಿಷನರ ಕಚೇರಿ, ಪ್ರೆಸ್ ಮೀಟ್ ಮಾಡಿದ್ದ ಕುಟುಂಬ ಇಂದು ಮಳೆಯಲ್ಲಿಯೇ ಹತ್ತಾರು ಜನರೊಂದಿಗೆ ಸೇರಿ ಹಳೆ ಹುಬ್ಬಳ್ಳಿ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ, ಕೇಸ್ ಅನ್ನು ಸಿಐಡಿ ತನಿಖೆಗೆ ಕೊಡಬೇಕು,ತಕ್ಷಣ 48 ಗಂಟೆ ಒಳಗೆ ಮೂವರು ಆರೋಪಿಗಳನ್ನ ಬಂಧಿಸಬೇಕು ಅಂತ ಪೊಲೀಸರಿಗೆ ಮನವಿ ಪತ್ರ ನೀಡಿದ್ದಾರೆ. ಇಲ್ಲದೆ ಹೋದಲ್ಲಿ ಬೆಳಗಾವಿ IG ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಕಣ್ಣೀರು ಹಾಕಿದ್ದಾರೆ
ಸದ್ಯ ಜನಪ್ರತಿನಿಧಿಯಾಗಿದ್ಧ ದೀಪಕ್ ಹತ್ಯೆ ಕೇಸ್ ನಲ್ಲಿ ಪೋಲೀಸರ ಮೇಲೇ ಆರೋಪ ಕೇಳಿಬಂದಿದೆ, ಮಾಸ್ಟರ್ ಮೈಂಡ್ ಆರೋಪಿಗಳಿಗೆ ಪೊಲೀಸರೇ ವಿಚಾರಣೆ ನಡೆಸದೆ ಕ್ಲೀನ್ ಚಿಟ್ ನೀಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ, ಇನ್ನಾದರೂ ಉನ್ನತ ಅಧಿಕಾರಿಗಳು ತನಿಖೆಯನ್ನು ಮರು ಪರಿಶೀಲಿಸಿ ನೈಜ ಆರೋಪಿಗಳ ಹೆಡೆಮುರಿ ಕಟ್ಟಬೇಕಿದೆ.
Kshetra Samachara
17/07/2022 12:41 pm