ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೂಗಲ್ ಪೇ ಮೇಲೆ ನಡೆಯಿತು ಅರಣ್ಯ ಇಲಾಖೆ ನೇಮಕಾತಿ: ಸಚಿವರ ಕೈವಾಡದ ಗಂಭೀರ ಆರೋಪ

ಹುಬ್ಬಳ್ಳಿ: ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಅಕ್ರಮದ ಕುರಿತು ಎಸಿಬಿಯಲ್ಲಿ ದೂರು ದಾಖಲಾಗಿದ್ದರೂ ತನಿಖೆ ಮಾತ್ರ ನಡೆಯುತ್ತಿಲ್ಲ. ಅಲ್ಲದೇ ಅಧಿಕಾರಿಗಳನ್ನು ನಾಮಮಾತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಅವ್ಯವಹಾರದಲ್ಲಿ ಸಚಿವರ ಕೈವಾಡವಿದೆ ಎಂಬುವಂತ ಗಂಭೀರ ಆರೋಪ ಕೇಳಿ ಬರುತ್ತಿದೆ.

ಹೌದು.. 117 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆ ವೇಳೆ ಹಿರಿಯ ಅಧಿಕಾರಿಗಳು ಲಂಚ ಪಡೆದು ನೇಮಕಾತಿ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಗೂಗಲ್ ಪೇ, ಪೋನ್ ಪೇ ಮೂಲಕ ಲಂಚ ಪಡೆದು ನೇಮಕಾತಿ ಆದೇಶ ನೀಡಿರುವುದನ್ನು ಪ್ರಶ್ನಿಸಿ ಎಸಿಬಿ ದೂರು ನೀಡಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ರಾಜ್ಯ ಅರಣ್ಯ ಇಲಾಖೆಯಲ್ಲಿ ಇತ್ತೀಚೆಗಷ್ಟೆ ಅರಣ್ಯ ರಕ್ಷಕ, ಉಪವಲಯ ಅರಣ್ಯ ಅಧಿಕಾರಿ, ವಲಯ ಅರಣ್ಯ ಅಧಿಕಾರಿ ಹುದ್ದೆಗಳಿಗ ನೇಮಕಾತಿ ಪ್ರಕ್ರಿಯೆ ನಡೆದಿದೆ. 117 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರೀಯೆ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಭ್ಯರ್ಥಿಗಳಿಂದ ನೇರವಾಗಿ ಲಂಚ ಪಡೆದು ನೇಮಕಾತಿ ಮಾಡಿದ್ದಾರಂತೆ. ಎಸಿಬಿಯಲ್ಲಿ ದೂರು ದಾಖಲಾಗಿದ್ದರೂ ತನಿಖೆ ಮಾತ್ರ ನಡೆಯುತ್ತಿಲ್ಲ. ಇದರಲ್ಲಿ ಸಚಿವ ಉಮೇಶ ಕತ್ತಿ ಕೈವಾಡವಿದೆ ಎಂಬುವುದು ಅಭ್ಯರ್ಥಿಗಳ ಮಾತು.

ವಿವಿಧ ಹುದ್ದೆಗಳ ನೇಮಕಾತಿ ವೇಳೆ ಅರಣ್ಯ ಭವನದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಪತ್ನಿಯ ಅಕೌಂಟ್ ಗಳಿಗೆ ಪೋನ್ ಪೇ ಮೂಲಕ ಲಂಚದ ಹಣ ಸಂದಾಯ ಮಾಡಲಾಗಿದೆಯಂತೆ. ಅರಣ್ಯ ಭವನದಲ್ಲಿನ ಕಾರ್ಯನಿರ್ವಹಿಸುವ ಎಫ್ ಡಿಎ ಪ್ರಕಾಶ, ಕೃಪಾನಿಧಿ. ವ್ಯವಸ್ಥಾಪಕ ಉಮಾಶಂಕರ ಅಭ್ಯರ್ಥಿಗಳಿಂದ ಹಣ ಪಡೆದು ನೇಮಕಾತಿ ಪ್ರಕ್ರಿಯೆ ಮಾಡಿದ್ದಾರೆಂತೆ. ಮೆರಿಟ್ ಪ್ರಕಾರ ಅಭ್ಯರ್ಥಿಗಳನ್ನ ಆಯ್ಕೆ ಮಾಡದೇ ಲಂಚ ಪಡೆದು ನೇಮಕಾತಿ ಮಾಡಿರುವ ಬಗ್ಗೆ ಈಗಾಗಲೇ ಸುರೇಂದ್ರ ಎನ್ನುವ ವಕೀಲರು ಎಸಿಬಿಗೆ ದೂರು ಸಹ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಎಸಿಬಿ ತನಿಖೆಗೆ ಅವಕಾಶ ಕಲ್ಪಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ‌ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

ಅರಣ್ಯ ಇಲಾಖೆಯಲ್ಲಿ ನಡೆದಿರುವ ಈ ನೇಮಕಾತಿ ಪ್ರಕ್ರಿಯೆಗೆ ಸಚಿವ ಉಮೇಶ ಕತ್ತಿ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಆದರೆ ಲಂಚ ಪಡೆದು ಅಕ್ರಮ ಎಸಗಿರುವ ಅರಣ್ಯ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಸಾಕ್ಷಿ ನಾಶ ಪಡಿಸುವ ಮುನ್ನ ಎಸಿಬಿ ಅಧಿಕಾರಿಗಳು ತನಿಖೆ ನಡೆಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಅನ್ನೋದು ಅಭ್ಯರ್ಥಿಗಳ ಆಗ್ರಹವಾಗಿದೆ.‌

Edited By : Manjunath H D
Kshetra Samachara

Kshetra Samachara

19/02/2022 03:12 pm

Cinque Terre

46.16 K

Cinque Terre

5

ಸಂಬಂಧಿತ ಸುದ್ದಿ