ಧಾರವಾಡ: ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ಅವರ ಕುರಿತು ಇನ್ನಷ್ಟು ದಾಖಲೆಗಳು ನನ್ನ ಬಳಿ ಇವೆ ಎಂದು ಸಾಮಾಜಿಕ ಹೋರಾಟಗಾರ ಎಂ.ಅರವಿಂದ ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರವಿ ಚೆನ್ನಣ್ಣವರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು ತಪ್ಪು. ಈ ಆದೇಶವನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳಿಗೆ ನಾನು ಈಮೇಲ್ ಮಾಡಿದ್ದೆ. ಇದೀಗ ಸರ್ಕಾರ ಆ ಆದೇಶವನ್ನು ತಡೆಹಿಡಿದಿದೆ ಎಂದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಗುರುತರ ಜವಾಬ್ದಾರಿ ಕೊಡಬಾರದು. ನಮ್ಮ ಸರ್ಕಾರ ಅವರ ನೇಮಕಾತಿ ಆದೇಶ ತಡೆಹಿಡಿದಿದ್ದು ಒಳ್ಳೆಯ ನಿರ್ಧಾರ. ರವಿ ಚೆನ್ನಣ್ಣವರ ಅವರು ಆರೋಪ ಮುಕ್ತರಾಗಿ ಬರಲಿ. ಸಮಯ ಬಂದಾಗ ಅವರ ಬಗ್ಗೆ ಇರುವ ಇನ್ನಷ್ಟು ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದು ಅರವಿಂದ ಹೇಳಿದರು.
Kshetra Samachara
31/01/2022 07:37 pm