ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಿಎಸ್‌ಐ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ; ಸಿಬಿಐ ತನಿಖೆಗೆ ಒತ್ತಾಯ

ಹುಬ್ಬಳ್ಳಿ: ಇತ್ತೀಚಿಗೆ 545 ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಅಭ್ಯರ್ಥಿಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮವಾಗಿದ್ದು, ಈ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಮ್ ಆದ್ಮಿ ಪಕ್ಷದ ಸಂಚಾಲಕ ವಿಕಾಸ್ ಸೊಪ್ಪಿನ ಹೇಳಿದರು.

ಮಾಧ್ಯಮಗಳೊಂದಿಗೆ ಅವರು, ಈ ಪರೀಕ್ಷಾ ಅಕ್ರಮದಿಂದ ನೊಂದ ಸಾವಿರಾರು ವಿದ್ಯಾರ್ಥಿಗಳು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈವರೆಗೆ ಬೃಹತ್ ಧರಣಿ ಸತ್ಯಾಗ್ರಹ ಮಾಡಿದ್ದಾರೆ ಎಂದರು. ಸಿಐಡಿ ತನ್ನ ತನಿಖೆಯಲ್ಲಿ ಬಿಜೆಪಿಯ ಮಹಿಳಾ ಘಟಕದ ನಾಯಕಿಯಾದ ದಿವ್ಯಾ ಹಾಗರಗಿ ಪ್ರಮುಖ ಆರೋಪಿ ಎಂದು ಪರಿಗಣಿಸಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ.

ದಿವ್ಯಾ ಹಾಗರಗಿ ಗೃಹ ಸಚಿವರ ನಿಕಟವರ್ತಿಗಳು ಆಗಿದ್ದರಿಂದ ಹಾಗೂ ಸೇವಾ ಆಯೋಗದ ಪರೀಕ್ಷೆಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಇರುವುದರಿಂದ ಗೃಹ ಸಚಿವರು ತಮ್ಮ ರಾಜೀನಾಮೆ ನೀಡಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಆಗದೇ ನಿಗಾವಹಿಸಬೇಕು. ಈ ತನಿಖೆಯ ಮುಖಾಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಟ್ಟು ವಿದ್ಯಾರ್ಥಿಗಳ ನಂಬಿಕೆ ಉಳಿಸಿಕೊಳ್ಳಬೇಕೆಂದು ಕೇಳಿಕೊಳ್ಳತ್ತೇವೆ ಎಂದರು.

Edited By : Manjunath H D
Kshetra Samachara

Kshetra Samachara

20/04/2022 12:54 pm

Cinque Terre

66.5 K

Cinque Terre

2

ಸಂಬಂಧಿತ ಸುದ್ದಿ