ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಧಾರವಾಡ ತಾಲೂಕಿನ ಹೊಸತೇಗೂರು ಗ್ರಾಮದಲ್ಲಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು ಇದೀಗ ನಾಗಪ್ಪ ಗಾಣಿಗೇರ ಎಂಬುವವರ ಪಿಸ್ತೂಲ್ ಸೀಜ್ ಮಾಡಿದ್ದಾರೆ.
ನಾಗಪ್ಪ ಗಾಣಿಗೇರ ಎಂಬಾತ ಮಡಿವಾಳೆಪ್ಪ ಬೆಳವಲದ ಎಂಬಾತನಿಗೆ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದರು. ಈ ಕುರಿತು ಗರಗ ಠಾಣೆಗೆ ಮಡಿವಾಳೆಪ್ಪ ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬಿಜೆಪಿ ಮುಖಂಡ ನಾಗಪ್ಪ ಗಾಣಿಗೇರ ಅವರ ಪಿಸ್ತೂಲ್ ಸೀಜ್ ಮಾಡಿ, ಅವರ ಲೈಸೆನ್ಸ್ ರದ್ಧತಿಗೆ ಕ್ರಮ ಜರುಗಿಸಿದ್ದಾರೆ.
Kshetra Samachara
03/02/2022 11:12 am