ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಚಾರಣೆ ಮುಗಿಸಿ ಹೊರಬಂದ ಶ್ರೀ ಪಾಟೀಲ

ಧಾರವಾಡ: ಧಾರವಾಡದ ಉಪನಗರ ಠಾಣೆಯಲ್ಲಿ ಸಿಬಿಐ ನಡೆಸಿದ ವಿಚಾರಣೆಯನ್ನು ಮುಗಿಸಿ ಶ್ರೀ ಪಾಟೀಲ ಹೊರಗಡೆ ಬಂದಿದ್ದಾರೆ.

ಶ್ರೀ ಪಾಟೀಲ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತರಾಗಿದ್ದಾರೆ. ಈ ಹಿಂದೆ ಸಿಬಿಐ ಇವರನ್ನೂ ವಿಚಾರಣೆಗೊಳಪಡಿಸಿತ್ತು.

ಇಂದು ಧಾರವಾಡದ ಉಪನಗರ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಹಾಗೂ ವಿಜಯ ಕುಲಕರ್ಣಿ ಅವರ ಜೊತೆಗೆ ಶ್ರೀ ಪಾಟೀಲ ಅವರನ್ನೂ ವಿಚಾರಣೆಗೊಳಪಡಿಸಿತ್ತು.

ವಿಚಾರಣೆ ಮುಗಿಸಿ ಬಂದ ನಂತರ, ಶ್ರೀ ಪಾಟೀಲ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನನ್ನನ್ನು ಹಾಗೂ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ ಎಂದಷ್ಟೆ ಪ್ರತಿಕ್ರಿಯೆ ನೀಡಿ ಹೊರಟು ಹೋದರು.

Edited By : Manjunath H D
Kshetra Samachara

Kshetra Samachara

05/11/2020 01:46 pm

Cinque Terre

97.12 K

Cinque Terre

3

ಸಂಬಂಧಿತ ಸುದ್ದಿ