ಧಾರವಾಡ: ನನ್ನ ತಮ್ಮನ ಕೊಲೆಯಲ್ಲಿ ಇನ್ನೂ ಕೆಲ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದಾರೆ ಅವರನ್ನೂ ಕರೆದು ವಿಚಾರಣೆ ಮಾಡಬೇಕು ಎಂದು ಯೋಗೀಶಗೌಡ ಅಕ್ಕ ಮಹಾದೇವಿ ಹೇಳಿದ್ದಾರೆ.
ಗೋವನಕೊಪ್ಪದ ಅವರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ತಮ್ಮನ ಕೊಲೆ ನಡೆದ ನಾಲ್ಕು ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರ ವಿನಯ ಹಾಗೂ ವಿಜಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸುತ್ತಿರುವುದು ಖುಷಿ ತಂದಿದೆ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ.
Kshetra Samachara
05/11/2020 12:58 pm