ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು. ಸದ್ಯ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಸಿಬಿಐ ತನಿಖೆ ವೇಳೆ ಸತ್ಯ ಬಯಲಾಗಿದೆ. ಪ್ರಕರಣದ ಆರೋಪಿ ಬಸವರಾಜ್ ಮುತ್ತಗಿ ಹತ್ಯೆಗೆ ವಿನಯ್ ಕುಲಕರ್ಣಿ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದ್ದಂತೆ ಆರೋಪಿ ಬಸವರಾಜ್ ಮುತ್ತಗಿ ಕೊಲೆಗೆ ಸುಪಾರಿ ನೀಡಲಾಗಿತ್ತು. ಏಕೆಂದರೆ ಯೋಗೀಶ್ ಹತ್ಯೆಗೆ ಸುಪಾರಿ ಕೊಟ್ಟಿರುವ ಬಗ್ಗೆ ಬಸವರಾಜ್ ಮುತ್ತಗಿ ಇತ್ತು ಎಂದು ಹೇಳಲಾಗುತ್ತಿದೆ. ಆತನನ್ನು ಕೊಲೆ ಮಾಡಲು ಬೆಂಗಳೂರು ಮೂಲದ ರೌಡಿಗೆ ಸುಪಾರಿ ನೀಡಲಾಗಿತ್ತು. ಈ ಮೂಲಕ ಬಸವರಾಜ್ ಮುತ್ತಗಿ ಹತ್ಯೆಯಾದರೆ ಪ್ರಕರಣ ಮುಚ್ಚಿಹಾಕಬಹುದು ಎನ್ನುವ ಪ್ಲ್ಯಾನ್ ಕೂಡ ಸಿದ್ಧವಾಗಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
Kshetra Samachara
13/12/2020 07:36 pm