ಧಾರವಾಡ: ಬಿಜೆಪಿ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣದ ಸಂಬಂಧ ಅನೇಕ ವಿಚಾರಗಳು ಒಂದೊಂದೇ ಹೊರ ಬೀಳುತ್ತಿವೆ.
ಸಿಬಿಐ 10 ಪುಟಗಳ ವರದಿಯನ್ನು ಕೋರ್ಟಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಯೋಗೀಶ್‌ಗೌಡ ಕೊಲೆಯ ಷಡ್ಯಂತ್ರವನ್ನು ವಿವರಿಸಲಾಗಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ದೆಹಲಿಯಲ್ಲಿ ಪ್ಲ್ಯಾನ್ ಹೆಣೆದಿದ್ದರು. ಅದರಂತೆ ಬೆಂಗಳೂರಿನಿಂದ ಬಂದ ಹಂತಕರು ಧಾರವಾಡದಲ್ಲಿ ಯೋಗೀಶ್‌ಗೌಡ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
2016ರಲ್ಲಿ ನಡೆದ ಧಾರವಾಡ ಜಿಲ್ಲಾ ಪಂಚಾಯತಿ ಚುನಾವಣೆಯಿಂದ ಹಿಂದೆ ಸರಿಯುವಂತೆ ವಿನಯ್ ಕುಲಕರ್ಣಿ ಅವರು ಯೋಗೀಶ್‌ಗೌಡ ಅವರಿಗೆ ಹೇಳಿದ್ದರು. ಆದರೆ ವಿರೋಧದ ನಡುವೆಯೂ ಯೋಗೀಶ್‌ಗೌಡ ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿಯನ್ ಕುಲಕರ್ಣಿ ಅವರು ಯೋಗೀಶ್‌ಗೌಡ ಅವರನ್ನು ಪೊಲೀಸ ಸಹಾಯದಿಂದ ಬಂಧಿಸಿದ್ದರು. ಇಷ್ಟೇಲ್ಲ ಬೆಳವಣಿಗೆ ಮಧ್ಯಯೂ ಯೋಗೀಶ್‌ಗೌಡ ಗೆಲುವು ಸಾಧಿಸಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ದ್ವೇಷ ಶುರುವಾಗಿತ್ತು. ಬಳಿಕ ಅದು ಕೊಲೆಯಲ್ಲಿ ಅಂತ್ಯವಾಯಿತು ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Kshetra Samachara
08/11/2020 06:56 pm