ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಂದು ಶಿಸ್ತನ್ನು ತರಬೇಕಾಗಿದೆ. ಅದಕ್ಕೆ ನೈಟ್ ಕರ್ಫ್ಯೂಜಾರಿ ಮಾಡಲಾಗಿದೆ - ಜಗದೀಶ್ ಶೆಟ್ಟರ್

ಹುಬ್ಬಳ್ಳಿ - ಒಂದು ಶಿಸ್ತನ್ನು ತರಬೇಕಾಗಿದೆ. ಅದಕ್ಕೆ ನೈಟ್ ಕರ್ಫ್ಯೂಜಾರಿ ಮಾಡಲಾಗಿದೆ. ರಾತ್ರಿ 10 ಕ್ಕೆ ಮಾಡಿದ್ರೂ, 11 ಕ್ಕೆ ಮಾಡಿದ್ರೂ ವಿರೋಧ ವ್ಯಕ್ತವಾಗುವುದು ಸಹಜ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಕ್ರಿಸ್ಮಸ್ ಹಾಗೂ ಹೊಸ ವರ್ಷ ಅಚರಣೆ ವೇಳೆ ಜನರು ಹೆಚ್ಚಾಗಿ ಸೇರಬಾರದೆಂದು ಕಪ್ಯೂ ಜಾರಿ ಮಾಡಲಾಗಿದೆ. ಕರ್ಫ್ಯೂಗಿಂತ ಜನರು ಸ್ವಪ್ರೇರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೊಟೇಲ್ ಗಳು ರಾತ್ರಿ 12 ರಿಂದ 1 ಗಂಟೆಯವರೆಗೆ ತೆರೆದಿರುತ್ತವೆ. ಅದಕ್ಕಾಗಿಯೇ ಸ್ವಲ್ಪ ಟೈಂ ಕಪ್ಯೂ ಜಾರಿ ಮಾಡಲಾಗಿದೆ ಎಂದರು.

ನೈಟ್ ಕರ್ಪ್ಯೂ ಪುನರ್ ಪರಿಶೀಲಿಸಬೇಕು ಎಂದು ಎಚ್ ವಿಶ್ವನಾಥ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು,

ಸರ್ಕಾರ ನಡೆಸುವವರಿಗೆ ಜವಾಬ್ದಾರಿ ಜಾಸ್ತಿ ಇರುತ್ತೆ ವಿರೋಧ ಮಾಡೋರ ಮಾಡಲಿ, ಸರ್ಕಾರ ಈಗಾಗಲೇ ತನ್ನ ನಿರ್ಧಾರ ಪ್ರಕಟಿಸಿದೆ ಎಂದು ಹೇಳುವ ಮೂಲಕ ಹೆಚ್. ವಿಶ್ವನಾಥಗೆ ತಿರುಗೇಟು ನೀಡಿದರು.

ಮೂರು ಸಾವಿರ ಮಠದ ಆಸ್ತಿ ಕಬಳಿಕೆ ದಿಂಗಾಲೇಶ್ವರ ಸ್ವಾಮೀಜಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಸಚಿವ ಜಗದೀಶ್ ಶೆಟ್ಟರ್,

ಮಠದ ಆಸ್ತಿ ದಾನ ವಿಚಾರವಾಗಿ ಹಿಂದಿನ ಸ್ವಾಮೀಜಿಗಳು ಮಾತನಾಡಿದ್ದರು.

ನಮ್ಮ ತಂದೆ ಹಾಗೂ ನನ್ನ ಮುಂದೆ ಹಲವು ಬಾರಿ ವಿಚಾರದ ಚರ್ಚೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲೂ ಮೆಡಿಕಲ್ ಕಾಲೇಜು ಆರಂಭ ಆದ್ರೆ, ಜಮೀನು ದಾನ ನೀಡುತ್ತೇನೆ ಎಂದಿದ್ದರು. ಹೀಗಾಗಿ ನಾವು ಕೂಡ ಹಲವು ಬಾರಿ ಕೋರೆ ಅವರಿಗೆ ಮೆಡಿಕಲ್ ಕಾಲೇಜು ಆರಂಭಕ್ಕೆ ಒತ್ತಾಯಿಸಿದ್ದೆ.

ಕೆಎಲ್ಇ ಒಂದು ಸೊಸೈಟಿ, ಸೊಸೈಟಿ ಗೆ ಆಸ್ತಿಯನ್ನು ನೀಡಿದ್ದಾರೆ. ಯಾವುದೋ ಕುಟುಂಬಕ್ಕೆ, ವೈಯಕ್ತಿಕವಾಗಿ ನೀಡಿಲ್ಲ. ಕುಟುಂಬಕ್ಕೆ ನೀಡಿದ್ರೆ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತಿತ್ತು ಎಂದು ದಿಂಗಾಲೇಶ್ವರ ಸ್ವಾಮೀಜಿ ಟೀಕೆಗೆ ಮರುಉತ್ತರ‌ ನೀಡಿದರು.

Edited By : Nagesh Gaonkar
Kshetra Samachara

Kshetra Samachara

24/12/2020 05:09 pm

Cinque Terre

46.05 K

Cinque Terre

7

ಸಂಬಂಧಿತ ಸುದ್ದಿ