ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಚಿವ ಸ್ಥಾನ ಯಾರಿಗಾದರೂ ನೀಡಲಿ, ನಮ್ಮದು ಕೇವಲ ಮೀಸಲಾತಿ ಹೋರಾಟ ಮಾತ್ರ - ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಸಚಿವ ಸ್ಥಾನ ಯಾರಿಗಾದರೂ ನೀಡಲಿ, ನಮ್ಮದು ಕೇವಲ 2ಎ ಮೀಸಲಾತಿ ಹೋರಾಟ ಮಾತ್ರ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆಗಾಗಿ ನಾವು ಈಗಾಗಲೇ ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡಿದ್ದೇವೆ. ಆದ್ರೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಹಾಗೂ ಮೀಸಲಾತಿ ನೀಡುವಂತೆ ಆಗ್ರಹಿಸಿ ಜನವರಿ 14 ರಿಂದ ಸಮುದಾಯದವರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಪಾದಯಾತ್ರೆ ಆರಂಭವಾಗಿ ಬೆಂಗಳೂರಿನಲ್ಲಿ ಫೆಬ್ರವರಿ 13 ಕ್ಕೆ ಮುಕ್ತಾಯವಾಗಿಲಿದೆ.

ರಾಜ್ಯ ಮಹಿಳಾ‌ ಚೆನ್ನಮ್ಮನ ಬಳಗ ಹಾಗೂ ಪಂಚಮಸಾಲಿ ಸಮುದಾಯದಿಂದ ಪಾದಯಾತ್ರೆ ನಡೆಸಲಿದ್ದೇವೆ ರಾಜ್ಯದ ಉದ್ದಗಲಕ್ಕೂ ಈ‌ ಪಾದಯಾತ್ರೆಯಲ್ಲಿ ಸಮುದಾಯದ ಜನ ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಮೂಲಕ 2 ಎ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಸಚಿವ ಸ್ಥಾನ ಯಾರಿಗಾದರೂ ನೀಡಲಿ, ನಮ್ಮದು ಕೇವಲ ಮೀಸಲಾತಿ ಹೋರಾಟ ಮಾತ್ರ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಸಚಿವಾಕಾಂಕ್ಷಿಗಳಿದ್ದಾರೆ ರಾಜ್ಯ ಸರ್ಕಾರ ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಲಿ. ಯಾರಿಗೇ ಸಚಿವ ಸ್ಥಾನ ನೀಡಿದರೂ ನಮ್ಮ ಅಭ್ಯಂತರವಿಲ್ಲ.

ಪ್ರತ್ಯೇಕ ಲಿಂಗಾಯತ ಹೋರಾಟ ಕಾನೂನಿನಡಿ ನಡೆಯುತ್ತಿದೆ. ಈ ಬಗ್ಗೆ ಲಿಂಗಾಯತ ಮಹಾಸಭಾ ತೀರ್ಮಾನ ತೆಗೆದುಕೊಳ್ಳಲಿದೆ

ಲಿಂಗಾಯತ ಮಹಾಸಭಾ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧರಿದ್ದೇವೆ ಎಂದರು.

Edited By : Nagesh Gaonkar
Kshetra Samachara

Kshetra Samachara

21/12/2020 02:32 pm

Cinque Terre

51.12 K

Cinque Terre

8

ಸಂಬಂಧಿತ ಸುದ್ದಿ