ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಮಡಕಿಹೊನ್ನಳ್ಳಿ ಗ್ರಾಮದ ಅಭಿವೃದ್ಧಿಗೆ ಬದ್ಧರಾಗಿರುವ ಉಮಾ ತಾರಿಹಾಳ

ಕಲಘಟಗಿ:ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಸಾಮಾಜಿಕ ಕಳಕಳಿಯ,ಮಹಿಳೆಯರಿಗೆ ಧ್ವನಿಯಾಗಬಲ್ಲ ಉಮಾ ಗೌರೀಶ ತಾರಿಹಾಳ ಗ್ರಾಮದ ಸರ್ವೋತೊಮುಖ ಅಭಿವೃದ್ಧಿಯ ಗುರಿಯನ್ನಿಟ್ಟುಕೊಂಡು ಒಂದನೇ ವಾರ್ಡ್ ನಿಂದ ಸಾಮಾನ್ಯ ಮಹಿಳಾ ವರ್ಗದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಆಟೋ ರಿಕ್ಷಾ ಚಿನ್ಹೆ ಪಡೆದು ಸ್ಪರ್ಧಿಸಿದ್ದಾರೆ.

ಎಂ‌ ಕಾಂ ಪದವೀಧರೆಯಾಗಿರುವ ಇವರು ಮಹಿಳೆಯರು ‌ಮುಖ್ಯವಾಹಿನಿಗೆ ಬರ ಬೇಕು ಎಂಬ ಆಶಾ‌ಭಾವನೆ‌ ಹೊಂದಿದ್ದಾರೆ. ಖಾಸಗಿಬ್ಯಾಂಕ್ ಹಾಗೂ ಶಾಲೆಯಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳ ಕಾಲ ಸೇವೆ ಮಾಡಿದ ಅನುಭವ ಇದ್ದು,ನನ್ನೂರಿಗೆ ಏನಾದರು ಸೇವೆ ಮಾಡುವ ಅಭಿಲಾಷೆ ಯಿಂದ ಚುನಾವಣೆಗೆ ಸಿದ್ದರಾಗಿದ್ದಾರೆ.

ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು,ಬಡವರಿಗೆ ಮನೆ ನಿರ್ಮಾಣ,ಗ್ರಾಮದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ನೀಡುವ ಹಾಗೂ ಸ್ವಚ್ಚ ಸುಂದರ ಗ್ರಾಮದ ನಿರ್ಮಾಣದ ಉದ್ದೇಶ ಹೊಂದಿದ್ದಾರೆ.

ಗ್ರಾಮಸ್ಥರು ಇಟ್ಟ ನಂಬಿಕೆ ಮತ್ತು ನಿರೀಕ್ಷೆಯನ್ನು ಎಂದಿಗೂ ಹುಸಿ ಮಾಡದೇ,ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ಧಿ ಒಂದೇ‌ ಎಂಬ

ನಂಬಿಕೆ,ವಿಶ್ವಾಸ ದೊಂದಿಗೆ ಶ್ರೀಮತಿ ಉಮಾ ಗೌರೀಶ ತಾರಿಹಾಳ ಚುನಾವಣೆಗೆ ಧುಮುಕಿದ್ದು,ಜನರ ಆಶಿರ್ವಾದವೇ‌ ಗೆಲುವಿನ ‌ಶ್ರೀರಕ್ಷೆ ಎಂದಿದ್ದಾರೆ.

Edited By :
Kshetra Samachara

Kshetra Samachara

19/12/2020 04:08 pm

Cinque Terre

26.19 K

Cinque Terre

0

ಸಂಬಂಧಿತ ಸುದ್ದಿ