ಕುಂದಗೋಳ : ತನ್ನೂರು ತನ್ನ ಮತಕ್ಷೇತ್ರದ ಅಭಿವೃದ್ಧಿ ನೊಂದವರ ಕಷ್ಟಕ್ಕೆ ಸದಾ ಎಲ್ಲಿದ್ದರು ಮಿಡಿಯುವ ಹೃದಯವೇಂದರೆ ಅದು ಕುಂದಗೋಳ ತಾಲೂಕು ಚಾಕಲಬ್ಬಿ ಗ್ರಾಮದ ಯಲ್ಲಪ್ಪ ಹನಮಂತಪ್ಪ ದಬಗೊಂದಿ ಮಾತ್ರ ಸತತ 13 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಡವರು, ಕಷ್ಟಕ್ಕೆ ತುತ್ತಾದವರಿಗೆ ಅನ್ನ ಆಶ್ರಯ ನೀಡುವುದರ ಜೊತೆ ಜಾಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಚಿಲುಮೆಯಾದವರು.
ಇದೇ 2018 ರಲ್ಲಿ ಕುಂದಗೋಳ ಮತಕ್ಷೇತ್ರದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದ ಯಲ್ಲಪ್ಪ ದಬಗೊಂದಿ ಒಬ್ಬ ಬೆಂಗಳೂರು ನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿ ಕುಂದಗೋಳ ತಾಲೂಕಿನ ಹಳ್ಳಿಯ ಜನರಿಗೆ ಕೊರೊನಾ ವೈರಸ್ ಮಹಾಮಾರಿ ದಿನಗಳಲ್ಲಿ ಇಡೀ ಕುಂದಗೋಳ ತಾಲೂಕಿನಾದ್ಯಂತ ಅಭಿಮಾನಿಗಳು ಕಾರ್ಯಕರ್ತರ ಮೂಲಕ ನೀಡಿದ ಸೇವೆಯನ್ನು ಜನ ಮರೆಯಲೂ ಸಾಧ್ಯವಿಲ್ಲ.
ಇದೇ ಕುಂದಗೋಳ ಪಟ್ಟಣದ ಪೌರ ಕಾರ್ಮಿಕರು, ಪತ್ರಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್ ಗೆ ಸನ್ಮಾನದ ಜೊತೆ ಗೌರವಧನ ನೀಡಿ ಅವರ ಆರ್ಥಿಕ ಸಂಕಷ್ಟಕ್ಕೆ ಕೈ ಜೋಡಿಸಿ ಕ್ಷೇತ್ರದ ಜನರಿಗೆ ನೆರವಾದವರು ಯಲ್ಲಪ್ಪ ದಬಗೊಂದಿ.
ಸ್ವಗ್ರಾಮ ಚಾಕಲಬ್ಬಿ ಗ್ರಾಮದ ರೇಣುಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸೇರಿ ಗ್ರಾಮದ ಏಳ್ಗೆಗೆ ತಮ್ಮ ಸ್ವಂತ ದುಡಿಮೆಯಲ್ಲಿ ಯಾರು ನೀಡಿರದ ಉನ್ನತ ಸೇವೆ ನೀಡಿ ಗ್ರಾಮಸ್ಥರು ಸನ್ಮಾನಕ್ಕೆ ಕೊರಳೊಡ್ಡಿದ ಧೀರ.
ಕೊರೊನಾ ವೈರಸ್ ಸಂದರ್ಭ ಸೇರಿ ಇಂದಿಗೂ ತನ್ನ ವಾಸದ ಸ್ಥಳ ಬೆಂಗಳೂರಿನಲ್ಲಿ ಬಡವರಿಗೆ ನಿತ್ಯ 300 ಜನರಿಗೆ ಆಹಾರ ವಿತರಿಸಿ ಸಮಾಜಪರ ಕಾರ್ಯಕ್ಕೆ ಜೈ ಎಂದು ನಿರ್ಗತಿಕರು, ಭಿಕ್ಷುಕರು, ಬುದ್ಧಿಮಾಂದ್ಯರನ್ನ ಎಲ್ಲರಂತೆ ಕಂಡು ಅವರಿಗೂ ಅನ್ನ ಆಶ್ರಯ ನೀಡಿ ಆಶ್ರಮದ ನೆರಳಲ್ಲಿಟ್ಟವರು.
ಕುಂದಗೋಳ ತಾಲೂಕಿನ ಯಾವುದೇ ಹಳ್ಳಿಯ ಮಕ್ಕಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಸಾಧನೆ ಉನ್ನತ ಮಟ್ಟದ ಸಾಧನೆ ತಿಳಿದು ವ್ಯಯಕ್ತಿಕವಾಗಿ ಧನಸಹಾಯ ಮಾಡಿ ಬಡಮಕ್ಕಳ ಕಲಿಕೆಗೆ ಸಹಾಯ ನೀಡಿ ಸದ್ಯ ಜನತಾ ಪಕ್ಷದ (ನೇಗಿಲು ಹೊತ್ತ ರೈತನ ಚಿಹ್ನೆ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜನಪರ ಕಾರ್ಯ ಮಾಡುತ್ತಿರುವ ಇವರು ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಮುಂದಿನ ಖಡಕ್ ಅಭ್ಯರ್ಥಿಯೆಂದೇ ಹೆಸರುವಾಸಿ.
ಸದಾ ಕ್ಷೇತ್ರದ ಅಭಿವೃದ್ಧಿಗೆ ಚಿಂತಿಸುವ ಯಲ್ಲಪ್ಪ ದಬಗೊಂದಿ ಮುಂಬರುವ ದಿನಗಳಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಕುಂದಗೋಳ ತಾಲೂಕಿನ ಪ್ರತಿ ಗ್ರಾಮ ಮನೆ ತಲುಪುವ ಇವ್ರು ಕಡು ಬಡತನದಲ್ಲಿ ಅರಳಿದ ಸಾಧನೆಯ ಹರಿಕಾರ.....
Kshetra Samachara
14/12/2020 02:22 pm